ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ರಾಜ್ಯೋತ್ಸವ: ಕೊಡಗು, ಬೆಳಗಾವಿಯಿಂದ ಅಪಸ್ವರ
ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ಅಲ್ಲಲ್ಲಿ ಅಪಸ್ವರಗಳು ಕೇಳಿಬರುತ್ತಿವೆ. ಕೊಡಗು ಜಿಲ್ಲೆಯಲ್ಲಿ ಜಮ್ಮಾ ಜಮೀನು ವಿವಾದ ತೀವ್ರ ಸ್ವರೂಪ ಪಡೆದಿದ್ದು, ಕೊಡವರು ಜಿಲ್ಲೆಯಾದ್ಯಂತ ರಾಜ್ಯೋತ್ಸವವನ್ನು ಬಹಿಷ್ಕರಿಸಿದ್ದಾರೆ.

ಮಡಿಕೇರಿಯ ಕೋಟೆ ಆವರಣದಲ್ಲಿ ರಾಜ್ಯೋತ್ಸವಕ್ಕೆ ಸಜ್ಜಾಗಿಟ್ಟಿರುವ ಸ್ಥಬ್ದ ಚಿತ್ರಗಳನ್ನು ಕೊಡಗು ಹೋರಾಟ ಸಮಿತಿ ಸದಸ್ಯರು ಧ್ವಂಸಮಾಡಿದ್ದಾರೆ. ಇಡೀ ಜಿಲ್ಲೆಯಲ್ಲಿ ಬಂದ್ ಆಚರಿಸಲಾಗುತ್ತಿದೆ.

ಜಮ್ಮಾ ಜಮೀನು ಕುರಿತ ಸರ್ಕಾರದ ಸುತ್ತೋಲೆಯನ್ನು ವಾಪಸ್ ಪಡೆಯದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಲಾಗಿದೆ. ನಾಳೆಯಿಂದ ಅಸಹಕಾರ ಚಳವಳಿ ಆರಂಭವಾಗಲಿದೆ.

ಬೆಳಗಾವಿಯಲ್ಲಿ ವಿಧಾನಸಭೆ ಅಧಿವೇಶನ, ವಿಧಾನಸೌಧ ನಿರ್ಮಾಣ ಹಾಗೂ ಮಹಾರಾಷ್ಟ್ರಕ್ಕೆ ಕೆಲ ಗ್ರಾಮಗಳನ್ನು ನೀಡಬೇಕೆನ್ನುವ ಮರಾಠಿಗರ ಒತ್ತಾಯಕ್ಕೆ ಮಣಿಯದಿರುವುದರುವುದನ್ನು ವಿರೋಧಿಸಿ ಮಹಾರಾಷ್ಟ್ರ ಏಕೀಕರಣ ಸಮಿತಿ ರಾಜ್ಯೋತ್ಸವ ಕಾರ್ಯಕ್ರಮಗಳನ್ನು ಬಹಿಷ್ಕರಿಸಿದೆ.
ಮತ್ತಷ್ಟು
ಇಂದು ರಾಷ್ಟ್ರಪತಿ ಆಳ್ವಿಕೆ ಹಿಂತೆಗೆತ?
ಕನ್ನಡದ ಕಳೆಯಿಲ್ಲದ ರಾಜ್ಯೋತ್ಸವ
ದ್ವಿತೀಯ ಪಿಯುಸಿ ವೇಳಾ ಪಟ್ಟಿ ಪ್ರಕಟ
ರಾಜ್ಯಪಾಲರ ನಿರ್ಧಾರಕ್ಕೆ ನಿರೀಕ್ಷೆ
ವಿಧಾನಸಭೆ ವಿಸರ್ಜನೆ; ಕಾಂಗ್ರೆಸ್ ಚಟುವಟಿಕೆ ತೀವ್ರ
ಎಂ.ಪಿ.ಪ್ರಕಾಶ್ ಓಲೈಕೆಗೆ ಯತ್ನ