ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಡಿಎಡ್ ವಿದ್ಯಾರ್ಥಿಗಳಿಗೆ ಪರೀಕ್ಷೆ ಅವಕಾಶ: ಹೈಕೋರ್ಟಿನಲ್ಲಿ ಅರ್ಜಿ
ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಪರಿಷತ್ ತಡವಾಗಿ ಮಾನ್ಯತೆ ಪಡೆದ 73 ಡಿಇಡಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರ ತನ್ನ ಕಡೆಯ ದಿನಗಳಲ್ಲಿ ಅನುಮತಿ ನೀಡಿರುವ ಕ್ರಮ ಹೈಕೋರ್ಟ್ ಮೆಟ್ಟಿಲೇರಿದೆ. ಸರ್ಕಾರದ ಈ ಕ್ರಮ ಪ್ರಶ್ನಿಸಿ ವಕೀಲ ನಾಗರಾಜ್ ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಸಿರಿಯಾಕ್ ಜೋಸೆಫ್ ಮತ್ತು ನ್ಯಾಯಮೂರ್ತಿ ಅಶೋಕ್ ಬಿ.ಹಿಂಚಿಗೇರಿ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ಕೈಗೆತ್ತಿಕೊಂಡಿದೆ.
ಡಿಇಡಿ ಕಾಲೇಜು ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಮತಿ ನೀಡಿ ಸರ್ಕಾರ ಅ.9ರಂದು ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಮಾಜಿ ಸಚಿವ ಬಸವರಾಜ ಹೊರಟ್ಟಿ ಸೇರಿದಂತೆ ಸರ್ಕಾರ, ಶಿಕ್ಷಣ ಇಲಾಖೆ ಹಾಗೂ ಎಸ್ಸಿಇಟಿಯನ್ನು ಪ್ರತಿ ವಾದಿಗಳನ್ನಾಗಿ ಮಾಡಲಾಗಿದೆ.

ತನಿಖೆಗೆ ಒತ್ತಾಯ: ಡಿಇಡಿ ಕಾಲೇಜುಗಳ ಹಾಜರಿ, ಪಠ್ಯಕ್ರಮ, ಪರೀಕ್ಷಾ ಕ್ರಮ ಸೇರಿದಂತೆ ಶೈಕ್ಷಣಿಕ ವಿಚಾರದಲ್ಲಿ ಸರ್ಕಾರ ಆಗಿಂದಾಗ್ಗೆ ನಿಯಮಾವಳಿಗಳನ್ನು ರೂಪಿಸುತ್ತಿದೆ. ಹೀಗಿದ್ದಾಗ್ಯೂ ನಾಯಿಕೊಡೆಗಳಂತೆ ಡಿಇಡಿ ಕಾಲೇಜುಗಳು ಹುಟ್ಟಿಕೊಳ್ಳುತ್ತಿವೆ. ಈ ಕಾಲೇಜುಗಳಿಗೆ ಅನುಮತಿ ನೀಡುತ್ತಿರುವ ಬಗ್ಗೆ ಸಿವಿಸಿ, ಸ್ವತಂತ್ರ ಸಂಸ್ಥೆ ಅಥವಾ ಸಿಬಿಐನಿಂದ ತನಿಖೆ ನಡೆಸಬೇಕೆಂದು ಅರ್ಜಿಯಲ್ಲಿ ಕೋರಲಾಗಿತ್ತು.
ಮತ್ತಷ್ಟು
ರಾಜ್ಯೋತ್ಸವ: ಕೊಡಗು, ಬೆಳಗಾವಿಯಿಂದ ಅಪಸ್ವರ
ಸುಖ ಸಂಸಾರಕ್ಕೆ ಗೌಡರ 11 ಸೂತ್ರಗಳು!
ಇಂದು ರಾಷ್ಟ್ರಪತಿ ಆಳ್ವಿಕೆ ಹಿಂತೆಗೆತ?
ಕನ್ನಡದ ಕಳೆಯಿಲ್ಲದ ರಾಜ್ಯೋತ್ಸವ
ದ್ವಿತೀಯ ಪಿಯುಸಿ ವೇಳಾ ಪಟ್ಟಿ ಪ್ರಕಟ
ರಾಜ್ಯಪಾಲರ ನಿರ್ಧಾರಕ್ಕೆ ನಿರೀಕ್ಷೆ