ಕರ್ನಾಟಕ ರಾಜ್ಯ ನಿರ್ಮಾಣವಾಗಿ ಅರ್ಧ ಶತಮಾನ ಮುಗಿದಿದೆ. ಸುವರ್ಣ ಕರ್ನಾಟಕ ಸಂಭ್ರಮ ಘೋಷಿಸಿ ಒಂದು ವರ್ಷ ಮುಗಿದಿದೆ. ರಾಜ್ಯದಲ್ಲಿ ರಾಜಕೀಯ ಗೊಂದಲ ಮುಂದುವರಿದೇ ಇದೆ. ರಾಜ್ಯೋತ್ಸವದ ಅಂಗವಾಗಿ ನಡೆಯುವ ಎಲ್ಲಾ ಕಾರ್ಯಕ್ರಮಗಳು ನಡೆಯುತ್ತವೆ. ಆದರೆ ಯಾವುದೇ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳ ಪಾತ್ರವಿರುವುದಿಲ್ಲ.
ಈಗ ರಾಜ್ಯದಲ್ಲಿ ರಾಷ್ಟ್ರಪತಿಯ ಪರವಾಗಿ ಆಡಳಿತ ಸೂತ್ರಗಳನ್ನು ಹಿಡಿದ ರಾಜ್ಯಪಾಲರು ಕರ್ನಾಟಕದ ಸುವರ್ಣ ಮಹೋತ್ಸವ ವರ್ಷದ ಸಮಾರೋಪ ಸಮಾರಂಭಗಳನ್ನು ಮುಂದಕ್ಕೆ ಹಾಕುವ ನಿರ್ಧಾರ ಪ್ರಕಟಿಸಿದ್ದು ಸಮಯೋಚಿತ ಎನ್ನುವುದು ಕನ್ನಡಿಗರ ಅಭಿಪ್ರಾಯ.
ಕಳೆದುಹೋದ ಅರ್ಧ ಶತಮಾನದಲ್ಲಿ ಕರ್ನಾಟಕ ರಾಜ್ಯದಲ್ಲಿ ಸಾಕಷ್ಟು ಪ್ರಗತಿಯಾಗಿದೆ. ಇಡೀ ದೇಶದಲ್ಲಿ ಕರ್ನಾಟಕ ಈಗ ದೊಡ್ಡ ರಾಜ್ಯಗಳ ಸಾಲಿನಲ್ಲಿ ನಿಂತಿದೆ. ಪ್ರಗತಿಯ ಎಲ್ಲ ಸೂಚ್ಯಂಕಗಳಲ್ಲೂ ಹೆಚ್ಚು ಕಡಿಮೆ ಸರಾಸರಿ ಮಟ್ಟದಿಂದ ಸ್ವಲ್ಪ ಮೇಲೇ ಇದೆ.
ರಾಜ್ಯದಲ್ಲಿ ಇನ್ನೂ ಆಗಲೇಬೇಕಾದ ಕೆಲಸ ಬೆಟ್ಟದಷ್ಟು ಬಾಕಿ ಇದೆ. ಆರ್ಥಿಕವಾಗಿ ರಾಜ್ಯ ಬಲವಾಗಬೇಕಾಗಿದೆ. ಇದಕ್ಕೆಲ್ಲಾ ರಾಜಕೀಯ ಇಚ್ಛಾಶಕ್ತಿಯೊಂದಿಗೆ ರಾಜಕೀಯ ಸ್ಥಿರತೆಯೂ ಅತ್ಯಗತ್ಯವಾಗಿದೆ ಎಂಬುದು ಜನತೆಯ ಸಾಮೂಹಿಕ ಅಭಿಪ್ರಾಯ
|