ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಪ್ರತಿಭಾ ಪಾಟೀಲ್ ಮರಳಿದ ನಂತರ ನಿರ್ಧಾರ
ಕರ್ನಾಟಕ ರಾಜ್ಯದ ಮೇಲೆ ಹೇರಲಾಗಿರುವ ರಾಷ್ಟ್ರಪತಿ ಆಡಳಿತ ಸದ್ಯಕ್ಕೆ ತೆರವಾಗಿ, ಭಾರತೀಯ ಜನತಾ ಪಕ್ಷ ಮತ್ತು ಜೆಡಿಎಸ್‌ ನಡುವಿನ "ರಂಗ" ಸರಕಾರ ಪುನಃ ಅಸ್ತಿತ್ವಕ್ಕೆ ಬರುವಂತೆ ಕಾಣುವಂತಿಲ್ಲ.ಕೇಂದ್ರ ರಾಜಕೀಯ ವ್ಯವಹಾರಗಳ ಸಮಿತಿ ಸಭೆ ಸೇರಿ, ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ತಿರುವನಂತಪುರಂದಿಂದ ನವದೆಹಲಿಗೆ ಮರಳಿದ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದೆ.

ಇದೇ ಸಮಯದಲ್ಲಿ ಜೆಡಿಎಸ್ ನಾಯಕ ಎಂ. ಪಿ ಪ್ರಕಾಶ ಅವರು ಬಿಜೆಪಿಯೊಂದಿಗೆ ಪುನರ್ ಮೈತ್ರಿದೆ ಸಿದ್ದವಿಲ್ಲ ಎಂದು ತಿಳಿದು ಬಂದಿದ್ದು, ಈ ಕುರಿತು ತಮ್ಮ ನಿರ್ಧಾರವನ್ನು ದೇವೆಗೌಡ ಅವರಿಗೆ ತಿಳಿಸಿದ್ದಾರೆ. ಪ್ರಕಾಶ ಅವರು ಪಕ್ಷ ವಿಭಜನೆಯಾಗುವುದನ್ನು ಈ ಸಮಯದಲ್ಲಿ ನಿರಾಕರಿಸಿದ್ದಾರೆ.

ಕಳೆದ ಎರಡು ದಿನಗಳಿಂದ ಕರ್ನಾಟಕ ರಾಜ್ಯಪಾಲ ರಾಮೇಶ್ವರ್ ಠಾಕೂರ್ ಅವರು ವಿನಾಕಾರಣ ಸರಕಾರ ರಚಿಸುವುದಕ್ಕೆ ಆಹ್ವಾನ ನೀಡದೆ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಮಿತ್ರ ಪಕ್ಷಗಳು ಆಪಾದಿಸಿವೆ. ಸರಕಾರ ರಚನೆಯ ನಿಟ್ಟಿನಲ್ಲಿ ಎರಡು ಪಕ್ಷಗಳು ಭಿನ್ನಮತವನ್ನು ಬದಿಗೊತ್ತಿ ಈಗಾಗಲೇ ಪ್ರಧಾನಿ ಮನ್‌ಮೋಹನ್ ಸಿಂಗ್ ಅವರನ್ನು ಭೇಟಿಯಾಗಿ ರಾಷ್ಟ್ರಪತಿ ಆಡಳಿತ ತೆರವಿಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಕೇಳಿಕೊಂಡಿವೆ.

ಜೆಡಿಎಸ್ ಅಧ್ಯಕ್ಷ ದೇವೆಗೌಡ ಅವರು ಬಿಜೆಪಿ ನೇತೃತ್ವದ ಸರಕಾರಕ್ಕೆ ಬೆಂಬಲ ನೀಡುವ ಕುರಿತು 11 ಶರತ್ತುಗಳನ್ನು ಹಾಕಿ, ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜ್‌ನಾಥ್ ಸಿಂಗ್ ಅವರಿಗೆ ಕಳುಹಿಸಿಕೊಟ್ಟಿದ್ದಾರೆ ಎನ್ನಲಾಗಿದೆ. ರಾಜ್‌ನಾಥ್ ಸಿಂಗ್ ಅವರಿಗೆ ಕಳುಹಿಸಿಕೊಟ್ಟಿರುವ ಶರತ್ತು ಪತ್ರದಲ್ಲಿ ಅಲ್ಪಸಂಖ್ಯಾತರ ಮತ್ತು ಹಿಂದುಳಿದ ವರ್ಗಗಳ ಹಕ್ಕುಗಳನ್ನು ರಕ್ಷಿಸಬೇಕು. ರಾಜ್ಯದ ಜಾತ್ಯಾತೀತ ವ್ಯವಸ್ಥೆಗೆ ದಕ್ಕೆಯಾಗಬಾರದು.

ರಾಜ್ಯದಲ್ಲಿನ ಮಿತ್ರಪಕ್ಷಗಳ ನಡುವಿನ ಒಪ್ಪಂದ ಮುಂಬರುವ ಲೋಕಸಭಾ ಚುನಾವಣೆಯವರೆಗೆ ಮಾತ್ರ ಚಾಲ್ತಿಯಲ್ಲಿ ಇರುತ್ತದೆ ಎಂದು ಗೌಡರು ಸ್ಪಷ್ಟಪಡಿಸಿದ್ದಾರೆ.
ಮತ್ತಷ್ಟು
ಸುವರ್ಣ ವರ್ಷಾಚರಣೆ ಸಮಾರೋಪ ಮುಂದಕ್ಕೆ
ಡಿಎಡ್ ವಿದ್ಯಾರ್ಥಿಗಳಿಗೆ ಪರೀಕ್ಷೆ ಅವಕಾಶ: ಹೈಕೋರ್ಟಿನಲ್ಲಿ ಅರ್ಜಿ
ರಾಜ್ಯೋತ್ಸವ: ಕೊಡಗು, ಬೆಳಗಾವಿಯಿಂದ ಅಪಸ್ವರ
ಸುಖ ಸಂಸಾರಕ್ಕೆ ಗೌಡರ 11 ಸೂತ್ರಗಳು!
ಇಂದು ರಾಷ್ಟ್ರಪತಿ ಆಳ್ವಿಕೆ ಹಿಂತೆಗೆತ?
ಕನ್ನಡದ ಕಳೆಯಿಲ್ಲದ ರಾಜ್ಯೋತ್ಸವ