ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಜೆಡಿ(ಎಸ್) ಯಾವುದೇ ಶರತ್ತು ವಿಧಿಸಿಲ್ಲ:ಯಡ್ಯೂರಪ್ಪ
ಮಾತುಕತೆಯ ಸಂದರ್ಭದಲ್ಲಿ ಜೆಡಿ(ಎಸ್) ಮುಖ್ಯಸ್ಥ ಎಚ್.ಡಿ.ದೇವೇಗೌಡ ಅವರು ಯಾವುದೇ ಶರತ್ತನ್ನು ವಿಧಿಸಿರಲಿಲ್ಲ ಎಂದು ಬಿಜೆಪಿ ಹಿರಿಯ ನಾಯಕ ಮತ್ತು ಕರ್ನಾಟಕದ ಮಾಜಿ ಉಪ ಮುಖ್ಯಮಂತ್ರಿ ಬಿ.ಎಸ್.ಯಡ್ಯೂರಪ್ಪ ಅವರು ತಿಳಿಸಿದ್ದಾರೆ.

ಮಾತುಕತೆಯ ವೇಳೆಯಲ್ಲಿ ಗೌಡ ಅವರು ಯಾವುದೇ ಶರತ್ತನ್ನು ವಿಧಿಸಿಲ್ಲ ಅಲ್ಲದೆ ಸರಕಾರ ರಚನೆಗೆ ನಿರ್ಬಂಧವಿಲ್ಲದ ಬೆಂಬಲವನ್ನು ನೀಡುತ್ತೇನೆ ಎಂದು ದೇವೇಗೌಡರು ಘೋಷಿಸಿದ್ದರು ಎಂದು ಯಡ್ಯೂರಪ್ಪ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಹೇಳಿದರು.

ಹಿಂದಿನ ಜೆಡಿ(ಎಸ್)-ಬಿಜೆಪಿ ಸರಕಾರದ ಸಂದರ್ಭದಲ್ಲಿ ನಿಬಂಧನೆಗಳು ಮತ್ತು ಶರತ್ತುಗಳ ನಿಲುವಿನೊಂದಿಗೆ ಸರಕಾರ ರಚನೆಯ ಪೂರ್ಣ ಭರವಸೆಯನ್ನು ನಾನು ಹೊಂದಿದ್ದೆ ಎಂದು ಯಡ್ಯೂರಪ್ಪ ಅವರು ತಿಳಿಸಿದರು.

ಶುಕ್ರವಾರ ಸಂಜೆಯೊಳಗೆ ನಾವು ಸರಕಾರ ರಚನೆಗೆ ಆಮಂತ್ರಿಸುತ್ತೇನೆ ಎಂಬ ಭರವಸೆಯನ್ನು ಹೊಂದಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡ ಅವರು ಸುದ್ದಿಗಾರರೊಂದಿಗೆ ತಿಳಿಸಿದ್ದು, ದೇವೇಗೌಡ ನೀಡಿರುವ ಶರತ್ತನ್ನು ಪರಿಗಣಿಸಲು ತನ್ನ ಪಕ್ಷವು ಸಿದ್ಧವಾಗಿದೆ. ಏನೇ ಆದರೂ ರಾಜ್ಯ ಅಥವಾ ಕೇಂದ್ರ ನಾಯಕತ್ವದಿಂದ ನಮಗೆ ಯಾವುದೇ ಅಂತಹ ಶರತ್ತಿನ ಪಟ್ಟಿಯು ದೊರೆತಿಲ್ಲ ಎಂದು ಅವರು ಹೇಳಿದರು.

ನಾವು ಯಾವುದೇ ಶರತ್ತಿನ ಪಟ್ಟಿಯನ್ನು ಇದುವರೆಗೆ ಸ್ವೀಕರಿಸಿಲ್ಲ. ಸಮ್ಮಿಶ್ರ ಜೊತೆಗಾರರು ರಾಜ್ಯದಲ್ಲಿ ಮತ್ತೊಮ್ಮೆ ಸರಕಾರವನ್ನು ರಚಿಸಲು ಸಿದ್ಧರಾಗಿದ್ದಾರೆ. ಒಂದುವೇಳೆ ಜೆಡಿ(ಎಸ್) ಯಾವುದೇ ಶರತ್ತನ್ನು ವಿಧಿಸಿದರೆ ನಾವು ಅದನ್ನು ಪರಿಗಣಿಸಲೂಬಹುದು ಎಂದು ಸದಾನಂದ ಗೌಡ ಅವರು ತಿಳಿಸಿದರು.

ಮತ್ತಷ್ಟು
ವಿಶ್ವ ಕನ್ನಡ ಸಮ್ಮೇಳನಕ್ಕೆ ಧಕ್ಕೆ ಇಲ್ಲ: ರಾಜ್ಯಪಾಲ
ಪ್ರತಿಭಾ ಪಾಟೀಲ್ ಮರಳಿದ ನಂತರ ನಿರ್ಧಾರ
ಸುವರ್ಣ ವರ್ಷಾಚರಣೆ ಸಮಾರೋಪ ಮುಂದಕ್ಕೆ
ಡಿಎಡ್ ವಿದ್ಯಾರ್ಥಿಗಳಿಗೆ ಪರೀಕ್ಷೆ ಅವಕಾಶ: ಹೈಕೋರ್ಟಿನಲ್ಲಿ ಅರ್ಜಿ
ರಾಜ್ಯೋತ್ಸವ: ಕೊಡಗು, ಬೆಳಗಾವಿಯಿಂದ ಅಪಸ್ವರ
ಸುಖ ಸಂಸಾರಕ್ಕೆ ಗೌಡರ 11 ಸೂತ್ರಗಳು!