ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಕಾಂಗ್ರೆಸ್ ಸೇರಲ್ಲ:ಎಂ.ಪಿ.ಪ್ರಕಾಶ್
ಯಡಿಯೂರಪ್ಪ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷ ಮತ್ತು ಜೆಡಿಎಸ್ ಮೈತ್ರಿಯ ಸರಕಾರ ರಚನೆ ಆದರೆ ಯಾವುದೇ ಸಚಿವ ಹುದ್ದೆ ಸ್ವೀಕರಿಸುವುದಿಲ್ಲ ಎಂದು ಮಾಜಿ ಗೃಹ ಸಚಿವ ಎಂ.ಪಿ.ಪ್ರಕಾಶ್ ಪಕ್ಷದ ವರಿಷ್ಠ ದೇವೇಗೌಡರಿಗೆ ಭರವಸೆ ನೀಡಿದ್ದಾರೆ.

ಪದ್ಮನಾಭನಗರದ ಗೌಡರ ಹಳೆ ನಿವಾಸದಲ್ಲಿ ಮಾತುಕತೆ ನಡೆಸಿದ ಪ್ರಕಾಶ್,ಪಕ್ಷವನ್ನು ತೊರೆಯದೇ ಪಕ್ಷದ ಸಂಘಟನೆಗೆ ಶ್ರಮಿಸುವ ಭರವಸೆ ನೀಡಿದ್ದಾರೆ.ಪಕ್ಷದಲ್ಲಿ ಸುಮಾರು 30ವರ್ಷಗಳಿಂದ ಸಕ್ರಿಯವಾಗಿ ತೊಡಗಿಸಿಕೊಂಡು ಬಂದಿರುವ ನಿಮ್ಮ ಬಗ್ಗೆ ತುಂಬಾ ಗೌರವವಿದೆ.ಯಾವುದೇ ಕಾರಣಕ್ಕೂ ನೊಂದು ಪಕ್ಷ ತೊರೆಯುವ ಕ್ರಮಕ್ಕೆ ಕೈ ಹಾಕಬೇಡಿ ಎಂದು ಗೌಡ ಪ್ರಕಾಶ್‌ಗೆ ಮನವಿ ಮಾಡಿಕೊಂಡರು.

ಅಲ್ಲದೇ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷಕ್ಕೆ ಸೇರುವುದಿಲ್ಲ ಎಂಬುದಾಗಿ ಪ್ರಕಾಶ್ ಅವರು ಸ್ಪಷ್ಟಪಡಿಸಿದರು.ಈ ಭೇಟಿಯ ನಂತರ ಪ್ರಕಾಶ್ ಅವರು ದೇವೇಗೌಡರ ಬಗ್ಗೆ ಹೊಂದಿದ್ದ ಕಠಿಣ ನಿಲುವಿನಲ್ಲಿ ಬದಲಾವಣೆ ಕಂಡುಬಂದಿತ್ತು.ಸುಮಾರು ಒಂದು ಗಂಟೆಗಳ ಕಾಲ ಗೌಡ ಮತ್ತು ಪ್ರಕಾಶ್ ಮಾತುಕತೆ ನಡೆಸಿದ್ದರು.

ಒಂದು ವಾರದ ಹಿಂದೆ ಯಾವುದೇ ರಾಜಕೀಯ ತಲ್ಲಣಗಳಿಗೂ ಕಾರಣವಾಗದ ಕರ್ನಾಟಕ, ಎಂ ಪಿ ಪ್ರಕಾಶ ನೇತೃತ್ವದಲ್ಲಿ ಕಾಂಗ್ರೆಸ್ ಬೆಂಬಲಿತ ಸರಕಾರ ಅಸ್ತಿತ್ವಕ್ಕೆ ಬರುತ್ತದೆ ಎನ್ನುವುದನ್ನು ಮನಗಂಡ ಕೂಡಲೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಯಡಿಯೂರಪ್ಪ ನೇತೃತ್ವದ ಬಿಜೆಪಿ ರಚಿಸುವ ಸರಕಾರಕ್ಕೆ ತಾನು ಬೆಂಬಲ ನೀಡುವುದಾಗಿ ಘೋಷಿಸಿ, ಅದರಂತೆ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರಿಗೆ ಜೆಡಿಎಸ್ ಬೆಂಬಲ ಪತ್ರವನ್ನು ನೀಡಿ. ಸರಕಾರ ರಚನೆಗೆ ಯಡಿಯೂರಪ್ಪ ಅವರನ್ನು ಆಹ್ವಾನಿಸುವಂತೆ ಕೇಳಿಕೊಂಡಿದ್ದಾರೆ.
ಮತ್ತಷ್ಟು
ಜೆಡಿ(ಎಸ್) ಯಾವುದೇ ಶರತ್ತು ವಿಧಿಸಿಲ್ಲ:ಯಡ್ಯೂರಪ್ಪ
ವಿಶ್ವ ಕನ್ನಡ ಸಮ್ಮೇಳನಕ್ಕೆ ಧಕ್ಕೆ ಇಲ್ಲ: ರಾಜ್ಯಪಾಲ
ಪ್ರತಿಭಾ ಪಾಟೀಲ್ ಮರಳಿದ ನಂತರ ನಿರ್ಧಾರ
ಸುವರ್ಣ ವರ್ಷಾಚರಣೆ ಸಮಾರೋಪ ಮುಂದಕ್ಕೆ
ಡಿಎಡ್ ವಿದ್ಯಾರ್ಥಿಗಳಿಗೆ ಪರೀಕ್ಷೆ ಅವಕಾಶ: ಹೈಕೋರ್ಟಿನಲ್ಲಿ ಅರ್ಜಿ
ರಾಜ್ಯೋತ್ಸವ: ಕೊಡಗು, ಬೆಳಗಾವಿಯಿಂದ ಅಪಸ್ವರ