ಕರ್ನಾಟಕದಲ್ಲಿ ಸರ್ಕಾರ ರಚನೆ ಮಾಡುವ ಕುರಿತು ಆವರಿಸಿರುವ ನಿಗೂಢತೆ ಶುಕ್ರವಾರ ಕೂಡ ಮುಂದುವರಿದಿದೆ. ಶುಕ್ರವಾರ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಕರ್ನಾಟಕದ ರಾಜಕೀಯ ಬೆಳವಣಿಗೆ ಕುರಿತು ಚರ್ಚೆಯಾಗಲೇ ಇಲ್ಲ.
ಸಂಪುಟದ ಕಾರ್ಯಸೂಚಿಯಲ್ಲಿ ಕರ್ನಾಟಕ ವಿಷಯ ಚರ್ಚೆಯಾಗಲಿಲ್ಲ. ಅದು ಸಿಸಿಪಿಎಯ ಚರ್ಚೆಯ ವಿಷಯ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪಿ.ಆರ್. ದಾಸ್‌ಮುನ್ಷಿ ಹೇಳಿದರು. ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ರದ್ದು ಮಾಡಿ ಜನಪ್ರಿಯ ಸರ್ಕಾರ ರಚನೆಗೆ ಕ್ಯಾಬಿನೆಟ್ ನಿರ್ದಾರ ಕೈಗೊಳ್ಳುವುದೆಂದು ಮಾಧ್ಯಮದ ವರದಿಗಳು ತಿಳಿಸಿತ್ತು. ಗುರುವಾರ ನಡೆದಿದ್ದ ಸಿಸಿಪಿಯ ಸಭೆಯಲ್ಲಿ ಕೂಡ ಈ ವಿಷಯ ಚರ್ಚಿತವಾಗಲಿಲ್ಲ ಎಂದು ವಿತ್ತಸಚಿವ ಚಿದಂಬರಂ ತಿಳಿಸಿದ್ದರು. ಶುಕ್ರವಾರ ಪುನಃ ನಡೆಯುವ ಸಿಸಿಪಿಎ ಸಭೆಯಲ್ಲಿ ಕರ್ನಾಟಕದ ವಿಷಯ ಚರ್ಚಿತವಾಗುವುದೆಂದು ನಿರೀಕ್ಷಿಸಲಾಗಿದೆ. ಈಗ ಚೆಂಡು ರಾಜ್ಯಪಾಲರ ಅಂಗಳದಲ್ಲಿ ಇರುವುದರಿಂದ ಅವರ ಪ್ರತಿಕ್ರಿಯೆಗಾಗಿ ಬಿಜೆಪಿ-ಜೆಡಿಎಸ್ ಕುತೂಹಲದಿಂದ ಕಾದಿವೆ.
|