ಸರಕಾರ ರಚನೆಗೆ ವಿಳಂಬ ನೀತಿ ಅನುಸರಿಸುತ್ತಿರುವ ಕೇಂದ್ರ ಸರಕಾರದ ಧೋರಣೆ ವಿರೋಧಿಸಿ ಬಿಜೆಪಿ ಮತ್ತು ಜೆಡಿಎಸ್ ಮಿತ್ರಪಕ್ಷಗಳ ಶಾಸಕರು ನಗರದಲ್ಲಿಂದು ಅನಿರ್ದಿಷ್ಠಾವಧಿ ಧರಣಿ ಆರಂಭಿಸಿದರು.
ಬಿಜೆಪಿ ಮುಖ್ಯಮಂತ್ರಿಗಳ ನೇತ್ರತ್ವದಲ್ಲಿ ಸರಕಾರ ರಚನೆಗೆ ರಾಜ್ಯಪಾಲ ರಾಮೇಶ್ವರ್ ಠಾಕೂರ್ ಅವರಿಂದ ಅಹ್ವಾನ ಕರೆ ಬರುವವರೆಗೂ ಧರಣಿ ಮುಂದುವರೆಯುತ್ತದೆ ಎಂದು ಉಭಯ ಪಕ್ಷದ ಮೂಲಗಳು ತಿಳಿಸಿವೆ.
ರಾಜ್ಯಪಾಲ ರಾಮೇಶ್ವರ್ ಠಾಕೂರ್ ರಾಜ್ಯದಲ್ಲಿ ಸರಕಾರ ರಚನೆ ಕುರಿತಂತೆ ಕಾನೂನು ತಜ್ಞರ ಸಲಹೆಗಳನ್ನು ಪಡೆಯುತ್ತಿದ್ದು, ಕೇಂದ್ರ ಸರಕಾರ ರಾಷ್ಟ್ರಪತಿ ಅಡಳಿತವನ್ನು ಹಿಂತೆಗೆಯುವ ನಿರ್ಧಾರಕ್ಕೆ ಬಾರದೇ ಇರುವುದು ಉಭಯ ಪಕ್ಷಗಳಿಗೆ ಅಸಮಧಾನ ಮೂಡಿಸಿದೆ.
ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಬಹುಮತ ಸಾಬೀತುಪಡಿಸಿದ ಏಳು ದಿನಗಳ ನಂತರವೂ ರಾಜ್ಯಪಾಲ ರಾಮೇಶ್ವರ್ ಠಾಕೂರ್ ಕೇಂದ್ರಕ್ಕೆ ಅಂತಿಮ ವರದಿಯನ್ನು ಸಲ್ಲಿಸಲು ವಿಳಂಬ ನೀತಿ ಅನುಸರಿಸುತ್ತಿರುವುದಕ್ಕೆ ಕೇಂದ್ರ ಕಾಂಗ್ರೆಸ್ ನಾಯಕರ ಒತ್ತಡ ಕಾರಣವಾಗಿದೆಎಂದು ಉಭಯ ಪಕ್ಷಗಳು ಆರೋಪಿಸಿವೆ .
ಇದೊಂದು ವಿಧಾನಸಭೆಯನ್ನು ಅಮಾನತುಗೊಳಿಸುವ "ಸಂಚು" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದಗೌಡ, ಮುಖ್ಯಮಂತ್ರಿ ಪಟ್ಟದ ಆಕಾಂಕ್ಷಿ ಯಡಿಯೂರಪ್ಪ ಅಕ್ರೋಶ ವ್ಯಕ್ತಪಡಿಸಿದ್ದಾರೆ.
|