ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ವಾಹನಗಳ ಗಾಜುಗಳಿಗೆ ಟಿಂಟ್ ಪೇಪರ್ ಅಂಟಿಸಬಾರದೆಂಬ ನಿಯಮ ಇಂದಿನಿಂದ ಜಾರಿಗೆ ಬರಲಿದೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತ ನೀಲಂ ಅಚ್ಚುತರಾವ್ ಇಂದು ಸುದ್ದಿಗಾರರಿಗೆ ಈ ವಿಷಯ ತಿಳಿಸಿ ಕಾರು ಹಾಗೂ ಇತರ ವಾಹನಗಳಿಗೆ ಟಿಂಟ್ ಗಾಜುಗಳನ್ನು ಅಳವಡಿಸಬಾರದೆಂಬ ಆದೇಶ ಜಾರಿಯಾಗಿದೆ ಎಂದಿದ್ದಾರೆ.
ಕಾಲ್ ಸೆಂಟರ್ ಮಹಿಳಾ ಉದ್ಯೋಗಿಯೊಬ್ಬರ ಕೊಲೆಯ ಪ್ರಕರಣದ ಹಿನ್ನೆಲೆಯಲ್ಲಿ ವಾಹನಗಳಿಗೆ ಟಿಂಟ್ ಗಾಜುಗಳ ಅಳವಡಿಕೆ ಮಾಡಬಾರದೆಂದು ಆದೇಶ ಹೊರಡಿಸಲಾಗಿದೆ.
ಆದರೆ ಅದನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿತ್ತು. ನಗರದಲ್ಲಿ ಹೆಚ್ಚುತ್ತಿರುವ ದರೋಡೆಕೋರರ ಹಾವಳಿ ಹಿನ್ನೆಲೆಯಲ್ಲಿ ಸಂಜೆ 6 ಗಂಟೆಯ ಬಳಿಕ ಸಾರ್ವಜನಿಕರು ಖಾಸಗಿ ವಾಹನಗಳಿಂದ ಡ್ರಾಪ್ ಪಡೆಯಬಾರದೆಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
|