ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಅಧಿಕಾರಿಗಳ ನಿವಾಸದ ಮೇಲೆ ಲೋಕಾಯುಕ್ತರ ದಾಳಿ
ಕರ್ನಾಟಕ ಲೋಕಾಯುಕ್ತರು ಪೋಲಿಸ್ ಮತ್ತು ಆರ್‌ಟಿಓ ಹಿರಿಯ ಅಧಿಕಾರಿಗಳ ನಿವಾಸಗಳ ಮೇಲೆ ಬೆಂಗಳೂರಿನಲ್ಲಿ ಶನಿವಾರ ಮುಂಜಾನೆಯಿಂದಲೇ ದಾಳಿ ಆರಂಭಿಸಿದ್ದಾರೆ.

ನಗರದ ಪ್ರಮುಖ ಪೋಲಿಸ್ ಅಧಿಕಾರಿಗಳ ಮನೆಗಳ ಮೇಲೆ ಮತ್ತು ಆರ್‌ಟಿಓ ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತರು ಅಕ್ರಮವಾಗಿ ಸಂಪಾದಿಸಿಟ್ಟ ಲಕ್ಷಾಂತರ ರೂ ನಗದು ಹಾಗೂ ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಈವರೆಗೆ ಇಬ್ಬರು ಎ ಸಿ ಪಿ, ನಾಲ್ವರು ಪೋಲಿಸ್ ಮತ್ತು ಒಬ್ಬ ಎಸ್ಪಿಯ ಮನೆಗಳ ಮೇಲೆ ದಾಳಿನಡೆದಿದ್ದು ಇಂದು ಮುಂಜಾನೆ 6 ಗಂಟೆಯ ಸುಮಾರಿಗೆ ಎಲ್ಲರ ಮನೆಗಳ ಮೇಲೆ ಒಟ್ಟಿಗೆ ದಾಳಿ ನಡೆದಿದೆ.

ಲೋಕಾಯುಕ್ತರ ದಾಳಿಯು ಇನ್ನೂ ಮುಂದುವರೆದಿದ್ದು, ಬಳಾರಿ, ಬೀದರ್‌ನಲ್ಲೂ ದಾಳಿ ನಡೆದಿರುವ ಬಗ್ಗೆ ತಿಳಿದು ಬಂದಿದೆ.
ಮತ್ತಷ್ಟು
ವಾಹನ ಗಾಜಿಗೆ ಟಿಂಟ್ ಪೇಪರ್ ನಿಷೇಧ ಜಾರಿ
ಬಿಜೆಪಿ-ಜೆಡಿಎಸ್ ಶಾಸಕರಿಂದ ಧರಣಿ ಆರಂಭ
ರಾಜ್ಯದಲ್ಲಿ ಮುಂದುವರಿದ ಅನಿಶ್ಚಿತತೆ
ಅನಿರ್ದಿಷ್ಟ ಚಳವಳಿ: ರಾಜ್ಯ ಬಿಜೆಪಿ ಒತ್ತಡ ತಂತ್ರ
ಸರ್ಕಾರ ರಚನೆ:ಮುಂದುವರಿದ ನಿಗೂಢತೆ
ಗೌಡರ ಷರತ್ತುಗಳ ಅಡಕತ್ತರಿಯಲ್ಲಿ ಬಿಜೆಪಿ