ಜೆಡಿಯಸ್ ನ ಬಂಡಾಯ ನಾಯಕ ಎಂ.ಪಿ.ಪ್ರಕಾಶ್ ಅವರನ್ನು ಕಾಂಗ್ರೇಸ್ ಪಕ್ಷಕ್ಕೆ ಸೆಳೆಯುವ ಪ್ರಯತ್ನಗಳು ನಡೆಯುತ್ತಿವೆ.
ಈಗಾಗಲೇ ಅವರಿಗೆ ಪಕ್ಷ ಆಹ್ವಾನ ನೀಡಿರುವುದಾಗಿ ಮಾಜಿ ಮುಖ್ಯಮಂತ್ರಿ ಧರಂಸಿಂಗ್ ತಿಳಿಸಿದ್ದಾರೆ. ಕಾಂಗ್ರೆಸ್ ತತ್ವ ಸಿದ್ದಾಂತಗಳಿಗೆ ಬದ್ದರಾಗಿ ಪಕ್ಷ ಸೇರುವುದಾದರೆ ಪ್ರಕಾಶ್ರವರಿಗೆ ಮುಕ್ತ ಸ್ವಾತಂತ್ರ ಇದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಧರಂಸಿಂಗ್ ಇಂದು ಎಂ.ಪಿ.ಪ್ರಕಾಶ್ ಅವರನ್ನು ಭೇಟಿ ಮಾಡಿ ಅರ್ಧ ಗಂಟೆಗೂ ಹೆಚ್ಚುಕಾಲ ಚರ್ಚೆ ನಡೆಸಿದರು.
ಪ್ರಸ್ತುತ ಪರಿಸ್ಥಿತಿಯಲ್ಲಿ ಸರ್ಕಾರ ರಚಿಸಲು ಯಾರಿಗೂ ಆಹ್ವಾನ ನೀಡದೇ ವಿಧಾನಸಭೆ ವಿಸರ್ಜಿಸಬೇಕೆಂದು ಪ್ರಕಾಶ್ ರಾಜ್ಯಪಾಲರನ್ನು ಆಗ್ರಹಿಸಿದ್ದಾರೆ.
ಜೆಡಿಯಸ್ ಕಾರ್ಯಕರ್ತರ ಮಾತಿಗೆ ಪಕ್ಷದಲ್ಲಿ ಮನ್ನಣೆ ಇಲ್ಲ ಎಂದು ಅವರು ಹೇಳಿದ್ದಾರೆ.
|