ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಗೌಡರ ಪತ್ರಕ್ಕೆ ಉತ್ತರಿಸಲು ಬಿಜೆಪಿ ನಿರಾಸಕ್ತಿ
ಕರ್ನಾಟಕ ವಿಧಾನಸಭೆಗೆ ಮರುಜೀವ ನೀಡಲು ಯುಪಿಎ ವಿಳಂಬ ನೀತಿ ಅನುಸರಿಸುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಬಿಜೆಪಿ, ಮಾಜಿ ಪ್ರಧಾನಿ, ಜೆಡಿಎಸ್ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ಹೊಸ ಸರಕಾರ ರಚನೆಗೆ ಮಂಡಿಸಿರುವ 12 ಸೂತ್ರಗಳ ಪತ್ರಕ್ಕೆ ಉತ್ತರಿಸುವ ಗೋಜಿಗೆ ಹೋಗಿಲ್ಲ.

ಕೇಂದ್ರದ ಪ್ರತಿಪಕ್ಷ ನಾಯಕ ಎಲ್.ಕೆ.ಆಡ್ವಾಣಿ ನಿವಾಸದಲ್ಲಿ ದೆಹಲಿಯಲ್ಲಿರುವ ಪ್ರಮುಖ ಬಿಜೆಪಿ ಮುಖಂಡರು ಶನಿವಾರ ಸಭೆ ಸೇರಿದ್ದು, ಈ ಕುರಿತು ನಿರ್ಧಾರ ತಳೆಯಲಾಯಿತು ಎಂದು ಹೇಳಲಾಗಿದೆ. ಪಕ್ಷವು ಗೌಡರ ಪತ್ರಕ್ಕೆ ಉತ್ತರಿಸುವುದಿಲ್ಲ ಎಂದು ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರ ಆಪ್ತರೊಬ್ಬರು ತಿಳಿಸಿದ್ದಾರೆ.

ಕಾಂಗ್ರೆಸ್ಸೇತರ ಸರಕಾರ ರಚನೆಯ ಕುರಿತಂತೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ದ್ವಿಮುಖ ನೀತಿಯನ್ನು ಬಹಿರಂಗಪಡಿಸುವ ನಿಟ್ಟಿನಲ್ಲಿ ಬಿಜೆಪಿಯು ರಾಷ್ಟ್ರಪತಿ ಪ್ರತಿಭಾ ದೇವಿಸಿಂಗ್ ಪಾಟೀಲ್ ಅವರೆದುರು ಬಲ ಪ್ರದರ್ಶನ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.
ಮತ್ತಷ್ಟು
ಕೃಷ್ಣ ಪೂಜೆ: ಉಡುಪಿ ಅಷ್ಷಮಠಾಧೀಶರಲ್ಲಿ ಭಿನ್ನಮತ
ಪ್ರಕಾಶ್‌ಗೆ ಕಾಂಗ್ರೇಸ್‌ನಿಂದ ಆಹ್ವಾನ
ಅಧಿಕಾರಿಗಳ ನಿವಾಸದ ಮೇಲೆ ಲೋಕಾಯುಕ್ತರ ದಾಳಿ
ವಾಹನ ಗಾಜಿಗೆ ಟಿಂಟ್ ಪೇಪರ್ ನಿಷೇಧ ಜಾರಿ
ಬಿಜೆಪಿ-ಜೆಡಿಎಸ್ ಶಾಸಕರಿಂದ ಧರಣಿ ಆರಂಭ
ರಾಜ್ಯದಲ್ಲಿ ಮುಂದುವರಿದ ಅನಿಶ್ಚಿತತೆ