ಜೆಡಿಎಸ್ ವರಿಷ್ಠ ದೇವೇಗೌಡರು ಸರ್ಕಾರ ರಚನೆಯ ಕುರಿತು ಬಿಜೆಪಿಗೆ 12 ಷರತ್ತುಗಳನ್ನು ವಿಧಿಸಿರುವುದಕ್ಕೆ ಪಕ್ಷಾಧ್ಯಕ್ಷ ರಾಜನಾಥ್ ಸಿಂಗ್ ಸದ್ಯಕ್ಕೆ ಉತ್ತರಿಸುವುದಿಲ್ಲ. ಬಿಜೆಪಿ ಮೂಲಗಳ ಪ್ರಕಾರ ಗೌಡರೇ ರಾಜನಾಥ್ ಜತೆ ಖುದ್ದು ಮಾತುಕತೆ ನಡೆಸುವುದಾಗಿ ತಿಳಿಸಿದ್ದಾರೆ.ಅಲ್ಲಿಯವರಿಗೆ ರಾಜನಾಥ್ ಷರತ್ತಿನ ಬಗ್ಗೆ ಮೌನ ತಾಳಲಿದ್ದಾರೆ.
ಬಿಜೆಪಿ ಸರ್ಕಾರ ರಚಿಸಲು ಬೆಂಬಲ ಕೊಟ್ಟಿದ್ದೇವೆ.ಇದು ಬೇಷರತ್ ಬೆಂಬಲ ಅಲ್ಲ. ನನ್ನನ್ನು ವಚನಭ್ರಷ್ಟ ಎಂದವರ ಬಣ್ಣವನ್ನು ಸರ್ಕಾರ ರಚನೆಯಾಗಿ ಯಡಿಯೂರಪ್ಪ ವಿಶ್ವಾಸಮತ ಯಾಚಿಸುವ ದಿನ ಬಯಲು ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.
ಸರ್ಕಾರ ರಚಿಸಲು ಬಿಜೆಪಿಗೆ ಕೇವಲ ಬೆಂಬಲ ಸೂಚಿಸಲಾಗಿದೆ ಎಂದು ಹೇಳಿದ್ದಾರೆ. ಸರ್ಕಾರ ರಚನೆಯಾಗಿ ಯಡಿಯೂರಪ್ಪ ವಿಶ್ವಾಸಮತ ಯಾಚಿಸುವ ದಿನ ತಮ್ಮ ವಿರುದ್ಧ ಟೀಕೆಗಳಿಗೆ ಉತ್ತರ ನೀಡುವುದಾಗಿ ಅವರು ತಿಳಿಸಿದ್ದಾರೆ.
|