ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಅಧಿಕಾರ:ಶಬರಿ ಸ್ಥಾನದಲ್ಲಿ ಬಿಜೆಪಿ
ಕೇಂದ್ರ ಸಚಿವ ಸಂಪುಟ ಶುಕ್ರವಾರವೂ ಕರ್ನಾಟಕದ ರಾಜಕೀಯ ಸ್ಥಿತಿಗೆ ಕೊನೆ ಹಾಡುವ ಯಾವುದೇ ಕ್ರಮ ತೆಗೆದುಕೊಂಡಿಲ್ಲ.

ಸದ್ಯದ ಪರಿಸ್ಥಿತಿ ನೋಡಿದರೆ ಮತ್ತೊಮ್ಮೆ ಮೈತ್ರಿ ಸರ್ಕಾರ ಸ್ಥಾಪನೆಗೆ ಕಾಯುತ್ತಿರುವ ರಾಜ್ಯ ಬಿಜೆಪಿ ಹಾಗೂ ಜಾತ್ಯಾತೀತ ಜನತಾದಳದ ಈ ಕಾಯುವ ಯಾತನೆ ಇನ್ನೂ ಒಂದು ವಾರ ಮುಂದುವರೆಯುವ ಸಾಧ್ಯತೆ ಇದೆ.

ಈ ಎಲ್ಲಾ ಗೊಂದಲದ ಬಗ್ಗೆ ಮಾತನಾಡಿದರೆ ಕೆಲಸ ಕೆಟ್ಟೀತು ಎನ್ನುವ ಅಭಿಪ್ರಾಯದಲ್ಲಿರುವ ಯಡಿಯೂರಪ್ಪ ಅವರು ಮೌನಕ್ಕೆ ಶರಣಾಗಿದ್ದಾರೆ.

ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರು ಅಂತಿಮ ವರದಿಯನ್ನು ಶನಿವಾರ ದೆಹಲಿಗೆ ರವಾನಿಸುವ ಸಂಭವವಿದೆ. ಈ ವರದಿ ನೀಡಿದನಂತರ ಸೋಮವಾರ ರಾಮೇಶ್ವರ ಠಾಕೂರ್ ಅವರು ದೆಹಲಿಗೆ ತೆರಳುವ ಸಾಧ್ಯತೆ ಇದೆ.

ವರದಿ ಕುರಿತು ಕೇಂದ್ರ ಸಚಿವ ಸಂಪುಟ ರಾಜಕೀಯ ವ್ಯವಹಾರಗಳು ಉಪಸಮಿತಿ ಈ ವಿಷಯವನ್ನು ಚರ್ಚೆಗೆ ಎತ್ತಿಕೊಳ್ಳಲು ಇನ್ನೂ ಮೂರ್ನಾಲ್ಕು ದಿನ ಆಗಬಹುದು.

ಸಂವಿಧಾನಕ್ಕೆ ಅನುಗುಣವಾಗಿ ಕೇಂದ್ರ ಸರ್ಕಾರ ನಡೆದುಕೊಳ್ಳುತ್ತದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಪ್ರಿಯರಂಜನ್ ದಾಸ್ ಮುನ್ಷಿ ತಿಳಿಸಿದ್ದಾರೆ.
ಮತ್ತಷ್ಟು
ದೇವೇಗೌಡರ ಷರತ್ತುಗಳಿಗೆ ಬಿಜೆಪಿ ಉತ್ತರವಿಲ್ಲ
ಗೌಡರ ಪತ್ರಕ್ಕೆ ಉತ್ತರಿಸಲು ಬಿಜೆಪಿ ನಿರಾಸಕ್ತಿ
ಕೃಷ್ಣ ಪೂಜೆ: ಉಡುಪಿ ಅಷ್ಷಮಠಾಧೀಶರಲ್ಲಿ ಭಿನ್ನಮತ
ಪ್ರಕಾಶ್‌ಗೆ ಕಾಂಗ್ರೇಸ್‌ನಿಂದ ಆಹ್ವಾನ
ಅಧಿಕಾರಿಗಳ ನಿವಾಸದ ಮೇಲೆ ಲೋಕಾಯುಕ್ತರ ದಾಳಿ
ವಾಹನ ಗಾಜಿಗೆ ಟಿಂಟ್ ಪೇಪರ್ ನಿಷೇಧ ಜಾರಿ