ವಿಶ್ವಪ್ರಸಿದ್ಧ ಹಂಪಿ ಉತ್ಸವ-2007ಕ್ಕೆ ನ. 3 ರ ಶನಿವಾರ ಸಂಜೆ 5 ಗಂಟೆಗೆ ಚಾಲನೆ ದೊರೆತಿದೆ. ಹಂಪಿಯ ವಿರೊಪಾಕ್ಷೇಶ್ವರ ದೇವಾಲಯ ಸಮೀಪದಲ್ಲಿ ಸ್ಥಾಪಿಸಿರುವ ಶ್ರೀಕೃಷ್ಣದೇವರಾಯ ಮುಖ್ಯ ವೇದಿಕೆಯಲ್ಲಿ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರು ಹಂಪಿ ಉತ್ಸವಕ್ಕೆ ಚಾಲನೆ ನೀಡಲಾಯಿತು.
ವಿಧಾನಸಭೆಯ ಅಧ್ಯಕ್ಷ ಕೃಷ್ಣ, ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಸಂಸದ ಜಿ. ಕರುಣಾಕರರೆಡ್ಡಿ ಮಾಜಿ ಸಚಿವರಾದ ಎಂ.ಪಿ.ಪ್ರಕಾಶ್, ಬಿ.ಶ್ರೀರಾಮುಲು, ಬಾಗೀರಥಿ ಟಿ. ಮರುಳಸಿದ್ಧನಗೌಡ, ಶಾಸಕ ಎಚ್.ಆರ್. ಗವಿಯಪ್ಪ ಭಾಗವಹಿಸಲಿದ್ದಾರೆ. ಹಂಪಿ ಉತ್ಸವದ ವಸ್ತು ಪ್ರದರ್ಶನ ಶನಿವಾರ ಉದ್ಘಾಟಿಸಿದರು. ಸಂಜೆ ಕೃಷ್ಣದೇವರಾಯ ವೇದಿಕೆಯಲ್ಲಿ ಸಾಂಸ್ಕ್ಕತಿಕ ಕಾರ್ಯಕ್ರಮಗಳು ಪ್ರಾರಂಭವಾಗಲಿವೆ. ಹಂಪಿಯ ವಿರೂಪಾಕ್ಷ ದೇವಾಲಯದ ಆವರಣದಲ್ಲಿರುವ ವಿದ್ಯಾರಣ್ಯರ ವೇದಿಕೆಯಲ್ಲಿ ನಡೆಯುವ ಸಾಂಸ್ಕ್ಕತಿಕ ಕಾರ್ಯಕ್ರಮವನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷ ಡಾ. ರಾಜಶೇಖರ್ ಮನ್ಸೂರ್ ಅವರು ಉದ್ಘಾಟಿಸುವವರು.
ಬಳ್ಳಾರಿ ರಾಘವ ವೇದಿಕೆಯಲ್ಲಿ ಹಾಗೂ ಎಚ್ಚಮನಾಯಕ ವೇದಿಕೆಯಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಯುವವೇದಿಕೆಯಲ್ಲಿ ಹಾಗೂ ತಿಮ್ಮಣ್ಣಕವಿ ವೇದಿಕೆಯಲ್ಲಿ ಸಹಾ ಸಾಂಸ್ಕ್ಕತಿಕ ಕಾರ್ಯಕ್ರಮಗಳು ನಡೆಯಲಿವೆ.
|