ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ವಿಧಾನಸಭೆ ವಿಸರ್ಜನೆ:ಕೇಂದ್ರಕ್ಕೆ ನಿಯೋಗ
ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಆಡಳಿತ ನಡೆಸಲು ಅವಕಾಶ ನೀಡಬಾರದು ಎಂದು ರಾಜ್ಯ ಕಾಂಗ್ರೆಸ್ ನಾಯಕರು ಮತ್ತೊಮ್ಮೆ ಪಕ್ಷದ ವರಿಷ್ಠರನ್ನು ಆಗ್ರಹಿಸಿದ್ದಾರೆ.

ಕೂಡಲೇ ವಿಧಾನಸಭೆಯನ್ನುವಿಸರ್ಜಿಸುವಂತೆ ಕಾಂಗ್ರೆಸ್ ಮುಖಂಡರಾದ ಆರ್.ವಿ.ದೇಶಪಾಂಡೆ, ರಮೇಶ್‌ ಕುಮಾರ್, ಕಾಗೋಡು ತಿಮ್ಮಪ್ಪ ಹಾಗು ವಿ.ಎಸ್.ಉಗ್ರಪ್ಪ ಅವರನ್ನು ಒಳಗೊಂಡ ನಿಯೋಗ ದೆಹಲಿಯಲ್ಲಿ ಪ್ರಧಾನಿ ಹಾಗೂ ಇತರೆ ಕಾಂಗ್ರೆಸ್ ವರಿಷ್ಠರನ್ನು ಭೇಟಿ ಮಾಡಿ ಆಗ್ರಹಪಡಿಸಿದೆ.

ಕೇಂದ್ರ ಸಚಿವರಾದ ಶಿವರಾಜಪಾಟೀಲ್, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಿಯರಂಜನ್ ದಾಸ್‌ ಮುನ್ಷಿ, ಪೃಥ್ವಿರಾಜ್ ಚೌಹಾಣ್ ಹಾಗೂ ಫರ್ನಾಂಡಿಸ್ ನಿಯೋಗ ಭೇಟಿ ಮಾಡಿತ್ತು.

ಕುಮಾರಸ್ವಾಮಿ ರಾಜೀನಾಮೆ ನೀಡಿದ ನಂತರ ವಿಧಾನಸಭೆಯನ್ನು ವಿಸರ್ಜಿಸಿ ಹೊಸ ಚುನಾವಣೆ ನಡೆಸುವಂತೆ ರಾಜ್ಯಪಾಲರಿಗೆ ಹೇಳಿದ್ದನ್ನು ಮತ್ತು ಇತರೆ ವಿವರಗಳನ್ನು ನಿಯೋಗ ವಿವರಿಸಿದೆ.

ಪರಸ್ಪರ ಕಚ್ಚಾಡಿದ ಪಕ್ಷಗಳು ಮತ್ತೆ ಸರ್ಕಾರ ರಚನೆ ಮಾಡಿದರೆ ರಾಜ್ಯ ಜನತೆಗೆ ಉತ್ತಮ ಆಡಳಿತ ನಿರ್ವವಣೆ ಸಾಧ್ಯವಿಲ್ಲ ಎಂದು ಮನವರಿಕೆ ಮಾಡಿದೆ.

ವಿಧಾನಸಭೆಯನ್ನು ವಿಸರ್ಜಿಸುವಂತೆ ದೇವೇಗೌಡರು ಸಹಾ ರಾಜ್ಯಪಾಲರಿಗೆ ಪತ್ರ ನೀಡಿದ್ದನ್ನು ಹೇಳಿದ್ದಾರೆ.

ತಮ್ಮ ಪಕ್ಷವನ್ನು ಉಳಿಸಿಕೊಳ್ಳಲು ಬಿಜೆಪಿಗೆ ಬೆಂಬಲ ನೀಡಿದ್ದಾಗಿ ಜೆಡಿಎಸ್ ಹೇಳಿದೆ. ಈ ನಿರ್ಣಯ ಜೆಡಿಎಸ್ ಹಿತಕ್ಕಾಗಿಯೇ ಹೊರತು ರಾಜ್ಯದ ಹಿತಕ್ಕೆ ಅಲ್ಲ, ಹೀಗಾಗಿ ರಾಜ್ಯದಲ್ಲಿ ಸುಭದ್ರ ಸರ್ಕಾರ ಸಾಧ್ಯವಿಲ್ಲದ ಮಾತು ಎಂದು ನಿಯೋಗದಲ್ಲಿದ್ದ ಮುಖಂಡರು ಹೇಳಿದ್ದಾರೆ.
ಮತ್ತಷ್ಟು
ಹೊಸ ಪರಿಸರ ಪ್ರವಾಸೋದ್ಯಮ ಯೋಜನೆ
ಹಂಪಿ ಉತ್ಸವಕ್ಕೆ ಚಾಲನೆ
ಅಧಿಕಾರ:ಶಬರಿ ಸ್ಥಾನದಲ್ಲಿ ಬಿಜೆಪಿ
ದೇವೇಗೌಡರ ಷರತ್ತುಗಳಿಗೆ ಬಿಜೆಪಿ ಉತ್ತರವಿಲ್ಲ
ಗೌಡರ ಪತ್ರಕ್ಕೆ ಉತ್ತರಿಸಲು ಬಿಜೆಪಿ ನಿರಾಸಕ್ತಿ
ಕೃಷ್ಣ ಪೂಜೆ: ಉಡುಪಿ ಅಷ್ಷಮಠಾಧೀಶರಲ್ಲಿ ಭಿನ್ನಮತ