ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ದೀಪಾವಳಿ ಹಬ್ಬಕ್ಕೆ ಹೆಚ್ಚಿನ ಬಸ್ ಸೌಕರ್ಯ
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರಿಗೆ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸುವ ಸಲುವಾಗಿ ನವೆಂಬರ್ 6 ರಿಂದ 11ರವರೆಗೆ ನಗರದಿಂದ ವಿವಿಧ ಊರುಗಳಿಗೆ 900 ಹೆಚ್ಚುವರಿ ವಾಹನಗಳ ಸಾರಿಗೆ ಸೌಕರ್ಯ ಕಲ್ಪಿಸಲು ಕೆ ಎಸ್ಆರ್.ಟಿ.ಸಿ ನಿರ್ಧರಿಸಿದೆ. ನಗರದ ಕೆಂಪೇಗೌಡ ಬಸ್ ನಿಲ್ದಾಣ ಮೈಸೂರು ರಸ್ತೆಯಲ್ಲಿರುವ ಬಸ್ ನಿಲ್ದಾಣ ಶಾಂತಿನಗರ ಬಸ್ ನಿಲ್ದಾಣದ ಮೂಲಕ ಹೆಚ್ಚುವರಿ ಬಸ್‌ಗಳು ಪ್ರಯಾಣಿಕರ ಸೇವೆಗೆ ಲಭ್ಯವಾಗಲಿದೆ.

ಕೆಎಸ್ ಆರ್ ಟಿ.ಸಿ ವ್ಯವಸ್ಥ್ಥಾಪಕ ನಿರ್ದೇಶಕ ಎ.ಪಿ.ಜೋಷಿ ಮಾಧ್ಯಮ ಪ್ರತಿನಿಧಿಗಳಿಗೆ ಈ ಕುರಿತು ಮಾಹಿತಿ ನೀಡಿ, ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ ಶಿವಮೊಗ್ಗ ದಾವಣಗೆರೆ ಹಾಸನ ತಿರುಪತಿ, ಮಧುರೈ,ಕುಂಬಕೋಣಂ,ಚೈನ್ನೈ,ಕೊಯಮತ್ತೂರು ಮತ್ತಿತರ ಊರುಗಳಗೆ ಸಾರಿಗೆ ಸೇವೆಯನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ವರ್ಷ ದಸರಾ ಹಬ್ಬಕ್ಕಾಗಿ ಒದಗಿಸಲಾದ ಸಾರಿಗೆ ಸೇವೆಯಿಂದ 2.34 ಕೋಟಿ ರೂಪಾಯಿ ಹೆಚ್ಚುವರಿ ಆದಾಯ ಬಂದಿದೆ. ಕಳೆದ ವರ್ಷ 1.89 ಕೋಟಿ ರೂಪಾಯಿ ಆದಾಯ ಬಂದಿತ್ತು ಎಂದೂ ಅವರು ತಿಳಿಸಿದ್ದಾರೆ.
ಮತ್ತಷ್ಟು
ಕಾಂಗ್ರೆಸ್ ಮೇಲೆ ಹರಿಹಾಯ್ದ ಗೌಡ
ಒಪ್ಪಂದಕ್ಕೆ ಒಪ್ಪಿಗೆ ಇಲ್ಲದಿದ್ದರೆ ಬೆಂಬಲವಿಲ್ಲ: ಜೆಡಿಎಸ್
ವಿಧಾನಸಭೆ ವಿಸರ್ಜನೆ:ಕೇಂದ್ರಕ್ಕೆ ನಿಯೋಗ
ಹೊಸ ಪರಿಸರ ಪ್ರವಾಸೋದ್ಯಮ ಯೋಜನೆ
ಹಂಪಿ ಉತ್ಸವಕ್ಕೆ ಚಾಲನೆ
ಅಧಿಕಾರ:ಶಬರಿ ಸ್ಥಾನದಲ್ಲಿ ಬಿಜೆಪಿ