ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಬಿಜೆಪಿಗೆ ಬೇಷರತ್ ಬೆಂಬಲ: ಕುಮಾರಸ್ವಾಮಿ
PTI
ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಸರಕಾರ ರಚಿಸುವ ಸಮಯದಲ್ಲಿ ಜಾತ್ಯಾತೀತ ಜನತಾದಳವು ಬೇಷರತ್ ಬೆಂಬಲವನ್ನು ಯಡಿಯೂರಪ್ಪ ನೆತೃತ್ವದ ಸರಕಾರಕ್ಕೆ ನೀಡಲಿದೆ ಎಂದು ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ತುರ್ತಾಗಿ ಕರೆಯಲಾಗಿದ್ದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್ ಡಿ ದೇವೆಗೌಡ ಅವರು ಭಾರತೀಯ ಜನತಾ ಪಕ್ಷಕ್ಕೆ ತಮ್ಮ 12 ಕರಾರುಗಳನ್ನು ತಿಳಿಸಿದ ಬಳಿಕ, ಕೆಲ ಟಿವಿ ಚಾನೆಲ್‌ಗಳು ನನ್ನ ಪಕ್ಷವನ್ನು ಖಳನಾಯಕನಂತೆ ಬಿಂಬಿಸುತ್ತಿದ್ದು, ಆದ್ದರಿಂದ ಬೆಂಬಲ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮ ಪಕ್ಷ ಯಾವುದೇ ಶರತ್ತುಗಳನ್ನು ಭಾರತೀಯ ಜನತಾ ಪಕ್ಷದ ಮುಂದಿಡುವುದಿಲ್ಲ ಎಂದು ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳ ವಿರುದ್ದ ಅದರಲ್ಲೂ ಟಿವಿ ಚಾನೆಲ್‌ಗಳ ವಿರುದ್ಧ ಹರಿ ಹಾಯ್ದು ಅವರು, ಇನ್ನು ಮುಂದೆ ನಾನು ಟಿವಿ ಚಾನೆಲ್‌ಗಳ ಸಲಹೆ ಪಡೆದು ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೆನೆ. ರಾಜ್ಯಪಾಲ ರಾಮೇಶ್ವರ್ ಠಾಕೂರ್ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಅನವಶ್ಯಕವಾಗಿ ಟಿ ವಿ ಚಾನೆಲ್ಲುಗಳು ನನ್ನ ಮತ್ತು ಪಕ್ಷದ ವಿರುದ್ಧ ಟೀಕೆ ಮಾಡುತ್ತಿದ್ದು. ಆದ್ದರಿಂದ ನಾನು ಇನ್ನು ಮುಂದೆ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸುವುದಿಲ್ಲ ಎಂದು ಹೇಳಿದ್ದಾರೆ.

ಭಾರತೀಯ ಜನತಾ ಪಕ್ಷದ ಸರಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ನಂತರ ಸಂಭವಿಸುವ ಯಾವುದೇ ಅಹಿತಕರ ಘಟನೆಗಳಿಗೆ ತಾನು ಮತ್ತು ತಮ್ಮ ಪಕ್ಷ ಜವಾಬ್ದಾರವಲ್ಲ ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾದ್ಯಮವಾಗಲಿ, ಪ್ರಜೆಗಳಾಗಲಿ ಜೆಡಿಎಸ್‌ನ್ನು ದೂರುವಂತಿಲ್ಲ ಎಂದು ಹೇಳಿದ್ದಾರೆ.

ಸೆಪ್ಟಂಬರ್ 30ರಂದು ಯಶವಂತ್ ಸಿನ್ಹಾ ಅವರು ದೇವೆಗೌಡ ಅವರನ್ನು ಭೇಟಿಯಾದ ನಂತರ ರಾಜ್ಯದಲ್ಲಿನ ಅತಂತ್ರ ರಾಜಕೀಯ ಪರಿಸ್ಥಿತಿಗೆ ಜೆಡಿಎಸ್ ಕಾರಣ ಎಂದು ಬಿಂಬಿಸಲಾಗುತ್ತದೆ ಎಂದು ಅವರು ಇದೇ ಸಮಯದಲ್ಲಿ ಆಪಾದಿಸಿದ್ದಾರೆ.
ಮತ್ತಷ್ಟು
ದೀಪಾವಳಿ ಹಬ್ಬಕ್ಕೆ ಹೆಚ್ಚಿನ ಬಸ್ ಸೌಕರ್ಯ
ಕಾಂಗ್ರೆಸ್ ಮೇಲೆ ಹರಿಹಾಯ್ದ ಗೌಡ
ಒಪ್ಪಂದಕ್ಕೆ ಒಪ್ಪಿಗೆ ಇಲ್ಲದಿದ್ದರೆ ಬೆಂಬಲವಿಲ್ಲ: ಜೆಡಿಎಸ್
ವಿಧಾನಸಭೆ ವಿಸರ್ಜನೆ:ಕೇಂದ್ರಕ್ಕೆ ನಿಯೋಗ
ಹೊಸ ಪರಿಸರ ಪ್ರವಾಸೋದ್ಯಮ ಯೋಜನೆ
ಹಂಪಿ ಉತ್ಸವಕ್ಕೆ ಚಾಲನೆ