ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಮಧ್ಯಂತರ ಚುನಾವಣೆಯೊಂದೆ ಪರ್ಯಾಯ:ಸಿದ್ಧರಾಮಯ್ಯ
ಕರ್ನಾಟಕದಲ್ಲಿರುವ ಚುನಾವಣಾ ಬಿಕ್ಕಟ್ಟಿಗೆ ಮಧ್ಯಂತರ ಚುನಾವಣೆಯೊಂದೆ ಸೂಕ್ತ ಪರ್ಯಾಯವಾಗಿದೆ ಎಂದು ಕರ್ನಾಟಕ ಮಾಜಿ ಉಪ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಹಿರಿಯ ನಾಯಕ ಎಂ.ಸಿದ್ಧರಾಮಯ್ಯ ಅವರು ಹೇಳಿದ್ದಾರೆ.

ಭಾರತೀಯ ಜನತಾ ಪಕ್ಷ ಮತ್ತು ಜೆಡಿ(ಎಸ್) ಎರಡೂ ಸರಕಾರ ರಚನೆಗೆ ಪ್ರಯತ್ನಿಸುತ್ತಿದ್ದು, ಆದರೆ ಅವರ ಪ್ರಯತ್ನವು ನಿಶ್ಪ್ರಯೋಜಕವಾಗಲಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಹೇಳಿದರು.

ಬಿಜೆಪಿ ಮತ್ತು ಜೆಡಿ(ಎಸ್) ಈಗಾಗಲೇ ಒಂದುಬಾರಿ ಪ್ರತ್ಯೇಕಗೊಂಡಿದ್ದ ಕಾರಣ ಮತ್ತೊಮ್ಮೆ ಈ ಎರಡೂ ಪಕ್ಷಗಳು ಜೊತೆಗೂಡಿ ಸರಕಾರ ರಚಿಸಲು ಸಾಧ್ಯವಿಲ್ಲ.ಪರ್ಯಾಯ ಸರಕಾರವೆಂದರೆ ಬೇರೆ ಬೇರೆ ಪಕ್ಷಗಳು ಜೊತೆಯಾಗಬೇಕು ಎಂದು ಸಿದ್ಧರಾಮಯ್ಯ ಅವರು ಹೇಳಿದರು.

ದೇಶದ ಸಂವಿಧಾನಾನಕ್ಕೆ ಅನುಗುಣವಾಗಿ ಸೂಕ್ತ ಕ್ರಮವನ್ನು ಕೈಗೊಳ್ಳುವಂತೆ ರಾಜ್ಯಪಾಲ ರಾಮೇಶ್ವರ್ ಠಾಕೂರ್ ಅವರನ್ನು ಕಾಂಗ್ರೆಸ್ ಪಕ್ಷವು ಒತ್ತಾಯಿಸುತ್ತಿತ್ತು ಎಂದು ಅವರು ಹೇಳಿದರು.

ಜೆಡಿ(ಎಸ್) ಬಿಜೆಪಿಯಿಂದ ರಚಿತಗೊಂಡಿದ್ದ ಸರಕಾರವು ಈಗಾಗಲೇ ಪತನಗೊಂಡಿದ್ದ ಕಾರಣ ಮತ್ತೊಮ್ಮೆ ಈ ಎರಡು ಪಕ್ಷಗಳು ಸ್ಥಿರ ಸರಕಾರವನ್ನು ರಚಿಸಲು ಅಸಾಧ್ಯವಾಗಿದೆ ಎಂದು ಮಾಜಿ ಸಚಿವ ಆರ್.ವಿ.ದೇಶ್‌ಪಾಂಡೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಹೇಳಿದರು.
ಮತ್ತಷ್ಟು
ಬಿಜೆಪಿಗೆ ಬೇಷರತ್ ಬೆಂಬಲ: ಕುಮಾರಸ್ವಾಮಿ
ದೀಪಾವಳಿ ಹಬ್ಬಕ್ಕೆ ಹೆಚ್ಚಿನ ಬಸ್ ಸೌಕರ್ಯ
ಕಾಂಗ್ರೆಸ್ ಮೇಲೆ ಹರಿಹಾಯ್ದ ಗೌಡ
ಒಪ್ಪಂದಕ್ಕೆ ಒಪ್ಪಿಗೆ ಇಲ್ಲದಿದ್ದರೆ ಬೆಂಬಲವಿಲ್ಲ: ಜೆಡಿಎಸ್
ವಿಧಾನಸಭೆ ವಿಸರ್ಜನೆ:ಕೇಂದ್ರಕ್ಕೆ ನಿಯೋಗ
ಹೊಸ ಪರಿಸರ ಪ್ರವಾಸೋದ್ಯಮ ಯೋಜನೆ