ಬಿಜೆಪಿ ನಿಯೋಗವೊಂದು ಭಾನುವಾರ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರನ್ನು ಭೇಟಿಯಾಗಿ, ಸರಕಾರ ರಚಿಸಲು ಶೀಘ್ರವೇ ಆಹ್ವಾನ ನೀಡುವಂತೆ ಒತ್ತಾಯಿಸಿತು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್, ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡ ಮತ್ತು ಮಾಜಿ ಸಚಿವ ಡಾ.ವಿ.ಎಸ್.ಆಚಾರ್ಯ ಅವರನ್ನೊಳಗೊಂಡ ನಿಯೋಗವು ಸುಮಾರು ಒಂದು ಗಂಟೆ ಕಾಲ ರಾಜ್ಯಪಾಲರೊಂದಿಗೆ ಚರ್ಚಿಸಿತು.
ತಾನು ಕೇಂದ್ರಕ್ಕೆ ಶೀಘ್ರವೇ ವರದಿ ಸಲ್ಲಿಸುವುದಾಗಿ ಮತ್ತು ಸಾಂವಿಧಾನಿಕ ವಿಧಿಯನುಸಾರ ಕ್ರಮ ಕೈಗೊಳ್ಳುವುದಾಗಿ ರಾಜ್ಯಪಾಲರು ಬಿಜೆಪಿ ನಿಯೋಗಕ್ಕೆ ಭರವಸೆ ನೀಡಿದರು.
ರಾಜ್ಯಪಾಲರಿಂದ ಭರವಸೆ ದೊರೆತ ಹಿನ್ನೆಲೆಯಲ್ಲಿ ಬಿಜೆಪಿಯು ಮಹಾತ್ಮ ಗಾಂಧಿ ಪ್ರತಿಮೆ ಎದುರು ನಡೆಸಲಾಗುತ್ತಿದ್ದ ಪ್ರತಿಭಟನಾ ಧರಣಿಯನ್ನು ಹಿಂತೆಗೆದುಕೊಂಡಿದ್ದು, ಸೋಮವಾರದಿಂದ "ಪ್ರಜಾಪ್ರಭುತ್ವ ಉಳಿಸಿ" ಆಂದೋಲನ ಆರಂಭಿಸಲು ನಿರ್ಧರಿಸಿದೆ.
|