ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ವೀಣಾಧರಿ ನೆನಪಿನಂಗಳದಲ್ಲಿ ವೀಣಾ ಆಸ್ಪತ್ರೆ
ಹಲವು ವರ್ಷಗಳಿಂದ ಎಚ್.ಐ .ವಿ ಪೀಡಿತೆಯಾಗಿ ಬಳಲುತ್ತಿದ್ದ ಸಾಮಾಜಿಕ ಕಾರ್ಯಕರ್ತೆ ವೀಣಾಧರಿ ಕಳೆದ ಶುಕ್ರವಾರ ಇಹಲೋಕ ತ್ಯಜಿಸಿದ್ದು, ಆಕೆಯ ಸ್ಮರಣಾರ್ಥ ಹೆಚ್.ಐ.ವಿ ಪೀಡಿತರಿಗಾಗಿ ಆಸ್ಪತ್ರೆಯೊಂದನ್ನು ಪ್ರಾರಂಭಿಸಲು ಪತ್ರಕರ್ತ ರವಿಬೆಳಗೆರೆ ನಿರ್ಧರಿಸಿದ್ದಾರೆ.

ಎಚ್.ಐ.ವಿ ಪೀಡಿತರ ಚಿಕಿತ್ಸೆಗಾಗಿ ಆಸ್ಪತ್ರೆಯನ್ನು ನಿರ್ಮಿಸುವುದು ವೀಣಾಧರಿ ಅವರ ಕನಸಾಗಿತ್ತು ಇವರ ಈ ಆಸೆಯನ್ನು ನೆರವೇರಿಸಲು ನಿರ್ಧರಿಸಿರುವುದಾಗಿ ಅವರು ಪ್ರಕಟಿಸಿದ್ದಾರೆ.

ಈ ನೂತನ ಆಸ್ಪತ್ರೆ ನಿರ್ಮಾಣದಿಂದಾಗಿ ಎಚ್.ಐ.ವಿ ಪೀಡಿತರು ತಮ್ಮ ಜೀವನದ ಕೊನೆ ಕ್ಷಣಗಳನ್ನು ನೆಮ್ಮದಿಯಿಂದ ಇಲ್ಲಿ ಕಳೆಯಬಹುದಾಗಿದೆ ಎಂದು ಪತ್ರಿಕಾಗೋಷ್ಟಿಯಲ್ಲಿ ಅವರು ಹೇಳಿದ್ದಾರೆ.

ಎಚ್.ಐ.ವಿ ಪೀಡಿತರಿಗೆ ನಿರ್ಮಿಸಲಾಗುವ ಆಸ್ಪತ್ರೆಗೆ ವೀಣಾ ಎಂಬ ಹೆಸರಿಡಲಾಗುವುದು. ಈ ಆಸ್ಪತ್ರೆಯು ಎಚ್.ಐ.ವಿ ಪೀಡಿತರ ಬಾಳಿಗೆ ಆಶಾಕಿರಣವಾಗಲಿದೆ. ಮುಂದಿನ ವರ್ಷದೊಳಗೆ ಈ ಆಸ್ಪತ್ರೆಯ ನಿರ್ಮಾಣ ಪೂರ್ಣಗೊಳ್ಳಲಿದ್ದು ಚಿಕಿತ್ಸಾ ಸೌಲಭ್ಯ ಎಚ್.ಐ.ವಿ.ಪೀಡಿತರಿಗೆ ದೊರಕಲಿದೆ. ಎಂದರು.
ಮತ್ತಷ್ಟು
ಅಧಿಕಾರಕ್ಕೆ ಒತ್ತಾಯಿಸಿ ಶಾಸಕರ ಪೆರೇಡ್
ಧರಣಿ ಕೈಬಿಟ್ಟ ಬಿಜೆಪಿ, "ಪ್ರಜಾಸತ್ತೆ ಉಳಿಸಿ" ಆಂದೋಲನ
ಬಿಜೆಪಿ-ಜೆಡಿಎಸ್ ವಿರುದ್ಧ ಕಾಂಗ್ರೆಸ್ ಜನಾಂದೋಲನ
ಮಧ್ಯಂತರ ಚುನಾವಣೆಯೊಂದೆ ಪರ್ಯಾಯ:ಸಿದ್ಧರಾಮಯ್ಯ
ಬಿಜೆಪಿಗೆ ಬೇಷರತ್ ಬೆಂಬಲ: ಕುಮಾರಸ್ವಾಮಿ
ದೀಪಾವಳಿ ಹಬ್ಬಕ್ಕೆ ಹೆಚ್ಚಿನ ಬಸ್ ಸೌಕರ್ಯ