ಬೆಂಗಳೂರು ಅರಮನೆ ಸುತ್ತಮುತ್ತಲ ಟ್ರ್ಯಾಫಿಕ್ ಜಾಮ್. ಅದಕ್ಕೆ ಕಾರಣ ಕಾಂಗ್ರೆಸ್ ಪಕ್ಷದ ಜನಾಂದೋಲನದ ಕಾರ್ಯಕ್ರಮ.
ಜೆಡಿಎಸ್ ಹಾಗೂ ಬಿಜೆಪಿ ವಿರುದ್ಧ ಕಾಂಗ್ರೆಸ್ ಹಮ್ಮಿಕೊಂಡಿರುವ ಈ ಬೃಹತ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನೀರೀಕ್ಷೆಗೂ ಮೀರಿ ಜನ ಬಂದಿದ್ದರಿಂದ ಅರಮನೆಗೆ ಹೋಗುವ ಎಲ್ಲಾ ರಸ್ತೆಗಳಲ್ಲೂ ಜನಸಾಗರ.
ಅದರಲ್ಲೂ ಬಳ್ಳಾರಿ ರಸ್ತೆಯಲ್ಲಿ ಅದರ ಪರಿಣಾಮ ಹೆಚ್ಚು. ಅರಮನೆ ಸುತ್ತ ವಾಹನ ನಿಯಂತ್ರಣಕ್ಕೆ ನಗರ ಸಂಚಾರಿ ಪೊಲೀಸರು ಕ್ರಮ ತೆಗೆದುಕೊಂಡಿದ್ದರೂ ಈ ಸಮಾವೇಶಕ್ಕೆ ಬೆಂಗಳೂರಿನ ಸುತ್ತಮುತ್ತಲಿನ ಎಂಟು ಜಿಲ್ಲೆಗಳಿಂದ ಜನರು ಬಂದಿದ್ದರಿಂದ ವಾಹನ ಸ್ಥಗಿತಗೊಂಡಿದ್ದು, ಜನರು ತೀವ್ರ ಸಂಕಷ್ಟಕ್ಕೆ ಒಳಗಾದರು.
ಮೇಖ್ರಿ ಸರ್ಕಲ್ ನಿಂದ ವಿಂಡ್ಸರ್ಮ್ಯಾನರ್ ಬಳಿಗೆ ವಾಹನದಲ್ಲಿ ಬರಲು ಸುಮಾರು 3 ಗಂಟೆ ಸಮಯ ಹಿಡಿಸಿತು ಎಂದು ದ್ವಿಚಕ್ರ ವಾಹನ ಸವಾರರೊಬ್ಬರು ಹೇಳಿದ್ದಾರೆ.
ಬೆಳಗ್ಗೆ 7 ಗಂಟೆಯಿಂದಲೇ ವಾಹನ ಸಂಚಾರ ಸ್ಥಗಿತಗೊಂಡಿತ್ತು.
ಜನಾಂದೋಲನ ಕಾರ್ಯಕ್ರಮ ಮುಗಿದನಂತರ ಮತ್ತೆ ಸಂಜೆ ಇದೇ ಪರಿಸ್ಥಿತಿ ಮರುಕಳಿಸಲಿದೆ ಎಂದು ಜನರು ಆತಂಕಕ್ಕೆ ಒಳಗಾಗಿದ್ದಾರೆ.
|