ಉಡುಪಿಯಲ್ಲಿ ಡಿ. 12 ರಿಂದ 15ರವರೆಗೆ ನಡೆಯಲಿರುವ 74ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ಧತೆಗಳು ಭರದಿಂದ ಸಾಗುತ್ತಿವೆ.
ಸಮ್ಮೇಳನದ ಮಹಾಮಂಟಪ ನಿರ್ಮಾಣಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ.
ಈ ಸಮ್ಮೇಳನಕ್ಕೆ ರಾಜ್ಯ ರಾಜಕಾರಣದ ಅನಿಶ್ವಿತ ಸ್ಥಿತಿಯಿಂದ ಧಕ್ಕೆ ಯಾಗುವುದಿಲ್ಲ ಎಂದು ಸಂಘಟಕರು ತಿಳಿಸಿದ್ದಾರೆ.
ಸಮ್ಮೇಳನ ಸ್ವಾಗತ ಸಮಿತಿ ಗೌರವಾಧ್ಯಕ್ಷ ಕೆ.ಕೆ. ಪೈ ಮಹಾಮಂಟಪ ನಿರ್ಮಾಣಕ್ಕೆ ಭೂಮಿ ಪ್ರಜೆ ನಡೆಸಿಕೊಟ್ಟಿದ್ದಾರೆ.
ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಕೆ. ರಘುಪತಿ ಭಟ್ ಸಮ್ಮೇಳನದ ಪ್ರತಿನಿಧಿ ಕೂಪನ್ ಗಳನ್ನು ಬಿಡುಗಡೆ ಮಾಡಿದರು.
ಸಮ್ಮೇಳನಕ್ಕೆ ಈಗಾಗಲೇ ಹಿಂದಿನ ಸರ್ಕಾರ ಬಜೆಟ್ನಲ್ಲಿ ಒಂದು ಕೋಟಿ ರೂ. ಅನುದಾನವನ್ನು ಒದಗಿಸಲಾಗಿದೆ.
ಉಡುಪಿ ನಗರ ರಸ್ತೆಗಳ ದುರಸ್ತಿಗಾಗಿ ಟೆಂಡರ್ ಕರೆಯಲಾಗಿದೆ. ಜನಪ್ರತಿನಿಧಿಗಳ ಸರ್ಕಾರ ರಚನೆ ಯಾಗದಿದ್ದರೂ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.
|