ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ಭಾನುವಾರ ಅಂತ್ಯಗೊಂಡ ಆರ್ಎಸ್ಎಸ್ ಕಾರ್ಯಕಾರಿಣಿ ಸಮಾವೇಶ ಹಲವಾರು ನಿರ್ಣಯಗಳನ್ನು ಕೈಗೊಂಡಿದೆ.
ಪಾಕಿಸ್ತಾನದಲ್ಲಿ ಮಿಲಿಟರಿ ಆಡಳಿತ ಬಂದಾಗಲೆಲ್ಲಾ ಭಾರತದ ಮೇಲೆ ದಾಳಿ, ಅತಿಕ್ರಮಣ ಯತ್ನಗಳು ನಡೆದಿರುವುದರಿಂದ ಭಾರತ ಸರ್ಕಾರ ಎಚ್ಚರ ವಹಿಸಬೇಕು ಎಂಬುದು ಈ ನಿರ್ಣಯಗಳ ಪೈಕಿ ಪ್ರಧಾನವಾದುದು. ಪರಮಾಣು ಪರೀಕ್ಷೆ ನಡೆಸುವ ಹಕ್ಕನ್ನು ಭಾರತಗದ ಯಾವುದೇ ಕಾರಣಕ್ಕು ಕಳೆದುಕೊಳ್ಳಬಾರದು.
ಅಮೆರಿಕಾ ಜತೆ ದೇಶವು ಮಾಡಿಕೊಂಡಿರುವ ಒಪ್ಪಂದದಲ್ಲಿ ಈ ಕುರಿತ ಅಂಶಗಳನ್ನು ಪಾರದರ್ಶಕವಾಗಿ ಇಟ್ಟಿಲ್ಲ. ಆದ್ದರಿಂದ ಒಪ್ಪಂದದ ಎಲ್ಲಾ ಅಂಶಗಳ ಬಗ್ಗೆ ಸಂಸತ್ನಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಬೇಕು.
ಇಲ್ಲವಾದರೆ ಆ ಒಪ್ಪಂದವನ್ನು ಆರ್ಎಸ್ಎಸ್ ವಿರೋಧಿಸುತ್ತದೆ ಎಂದು ಸಭೆ ತೀರ್ಮಾನಿಸಿದೆ. ಎಂದೂ ತಾನಾಗಿ ದಂಡೆತ್ತಿಹೋಗದ ಭಾರತವನ್ನು ಪಾಕಿಸ್ತಾನದಂತೆ ನೋಡಬಾರದು ಎಂಬ ಅಂಶವನ್ನು ಅಮೆರಿಕಾಗೆ ಸ್ವಷ್ಟವಾಗಿ ಹೇಳಬೇಕು ಎಂದು ಸಮಾವೇಶ ಹೇಳಿದೆ.
ಶ್ರೀರಾಮಸೇತು ಮತ್ತು ಪರಿಶಿಷ್ಟ ಕ್ರೈಸ್ತರಿಗೆ ಮಿಸಲಾತಿ ಅಲ್ಲದೇ ದೇಶದ ಆರ್ಥಿಕ ನೀತಿ ಬಗ್ಗೆ ದೇಶೀಯ ಪದ್ಧತಿಯಲ್ಲಿ ಕೃಷಿ ಕೈಗೊಳ್ಳುವ ಬಗ್ಗೆ ಸಮಾವೇಶ ಚರ್ಚಿಸಿದೆ.
ದೇಶೀಯ ಪದ್ಧತಿಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹೆಚ್ಚಿನ ಕರಸೇವಕರನ್ನು ತೊಡಗಿಸಲು ತೀರ್ಮಾನಿಸಲಾಗಿದೆ.
|