ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ರಾಜ್ಯಪಾಲರಿಂದ ಪಾಟೀಲ್ ಭೇಟಿ
ಕರ್ನಾಟಕ ರಾಜ್ಯಪಾಲ ರಾಮೇಶ್ವರ್ ಠಾಕೂರ್ ಮಂಗಳವಾರ ಗೃಹಸಚಿವ ಶಿವರಾಜ ಪಾಟೀಲ್ ಅವರನ್ನು ಭೇಟಿ ಮಾಡಿ ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ವಿವರಿಸಿದರು. ಸರ್ಕಾರ ರಚನೆಗೆ ಯಡ್ಯೂರಪ್ಪ ನೇತೃತ್ವದ ಬಿಜೆಪಿ-ಜೆಡಿಎಸ್ ಸರ್ಕಾರವನ್ನು ಆಹ್ವಾನಿಸದೇ ಬಿಜೆಪಿಯಿಂದ ಟೀಕಾಪ್ರಹಾರಕ್ಕೆ ಒಳಗಾಗಿರುವ ಠಾಕೂರ್ ತಾವು ಅ.31ರಂದು ಕೇಂದ್ರ ಸರ್ಕಾರಕ್ಕೆ ಕರ್ನಾಟಕದ ಸ್ಥಿತಿಗತಿಯ ಸಮಗ್ರ ವರದಿಯನ್ನು ಕಳಿಸಿದ ಬಳಿಕ ಕರ್ನಾಟಕದ ಬೆಳವಣಿಗೆಗಳ ಬಗ್ಗೆ ಪಾಟೀಲ್‌ಗೆ ವಿವರಿಸಿದರೆಂದು ತಿಳಿದುಬಂದಿದೆ.

ಠಾಕುರ್ ಬಳಿಕ ಒಕ್ಕೂಟ ವ್ಯವಸ್ಥೆಯ ಸಮಾವೇಶದಲ್ಲಿ ಭಾಗವಹಿಸಿದ ಬಳಿಕ ತೆರಳಿದರೆಂದು ಗೊತ್ತಾಗಿದೆ.ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಎದುರಿಗೆ ಮಂಗಳವಾರ 129 ಶಾಸಕರನ್ನು ಪರೇಡ್ ಮಾಡುವ ಮೂಲಕ ಬಿಜೆಪಿ-ಜೆಡಿಎಸ್ ಕೂಟದ ಬಲಪ್ರದರ್ಶನಕ್ಕೆ ಮುನ್ನವೇ ಠಾಕೂರ್ ಅವರು ಗೃಹಸಚಿವರನ್ನು ಭೇಟಿ ಮಾಡಿದ್ದಾರೆ.

ರಾಜ್ಯಪಾಲರು ತಮ್ಮ ವರದಿಯಲ್ಲಿ ಜೆಡಿಎಸ್-ಬಿಜೆಪಿ ಸರ್ಕಾರ ಪತನದ ನಂತರದ ಘಟನಾವಳಿಗಳ ಬಗ್ಗೆ ವಿವರಿಸಿದ್ದಾರೆಂದು ರಾಜಭವನ ಮೂಲಗಳು ಬೆಂಗಳೂರಿನಲ್ಲಿ ತಿಳಿಸಿವೆ.
ಮತ್ತಷ್ಟು
ರಾಜ್ಯ ರಾಜಕಾರಣ: ಕೇಂದ್ರ ನಿರ್ಧಾರ ಇಂದು
ಅವಕಾಶವಾದಿ ರಾಜಕಾರಣದ ವಿರುದ್ದ ಜನಾಂದೋಲನ:ಕಾಂಗ್ರೆಸ್
ಆರ್ಎಸ್ಎಸ್ ಕಾರ್ಯಕಾರಿಣಿ ಮಹತ್ವದ ನಿರ್ಣಯಗಳು
ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ಧತೆ
ಕಾಂಗ್ರೆಸ್ ಜನಾಂದೋಲನ: ವಾಹನ ಸಂಚಾರ ಸ್ಥಗಿತ
ವೀಣಾಧರಿ ನೆನಪಿನಂಗಳದಲ್ಲಿ ವೀಣಾ ಆಸ್ಪತ್ರೆ