ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಅಂತಿಮ ವರದಿ ಬಗ್ಗೆ ರಾಜ್ಯಪಾಲರ ಗುಟ್ಟು
ದೋಸ್ತಿ ಪಕ್ಷಗಳ ಹೊಸ ಮೈತ್ರಿ ಸರ್ಕಾರ ರಚನೆಯ ಭವಿಷ್ಯ ನಿರ್ಧರಿಸಬಲ್ಲ ಅಂತಿಮ ವರದಿಯೊಂದಿಗೆ ಕರ್ನಾಟಕ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರು ನವದೆಹಲಿಗೆ ತೆರಳಿದ್ದಾರೆ.

ಆದರೆ ಈ ವಿಷಯ ಮಾತ್ರ ಗುಟ್ಟಾಗಿ ಉಳಿದಿದೆ. ದೆಹಲಿಗೆ ಬಂದಿಳಿದ ರಾಮೇಶ್ವರ ಠಾಕೂರ್ ತಾವು ನೀಡುತ್ತಿರುವ ಅಂತಿಮ ವರದಿಯ ಬಗ್ಗೆ ಏನನ್ನೂ ಹೇಳಲು ಇಚ್ಛಿಸಲಿಲ್ಲ.

ತಮ್ಮ ಭೇಟಿ ಉದ್ದೇಶ ಬೇರೆ ಎಂದು ಹೇಳಿ ಸುದ್ದಿಗಾರರು ಊಹಾಪೋಹಗಳಿಗೆ ಶರಣಾಗುವಂತೆ ಮಾಡಿದ್ದಾರೆ.

ಕೇಂದ್ರ ಸರ್ಕಾರಕ್ಕೆ ವರದಿ ನೀಡುವ ಕಾರ್ಯಕ್ರಮ ಅವರಿಗೆ ಇರಬಹುದು. ಆದರೆ ಅವರು ಪಾಲ್ಗೊಳ್ಳಬೇಕಾಗಿರುವ ಪೂರ್ವ ನಿಯೋಜಿತ ಕಾರ್ಯಕ್ರಮವೊಂದು ಬುಧವಾರ ನಡೆಯಲಿದೆ.

ಒಕ್ಕೂಟ ವ್ಯವಸ್ಥೆ ಕುರಿತಾದ ಅಂತಾರಾಷ್ಟ್ತ್ರೀಯ ಸಮ್ಮೇಳನ ನಡೆಯುತ್ತಿದ್ದು, ಅದರಲ್ಲಿ ವಿತ್ತೀಯ ಹೊಣೆಗಾರಿಕೆ ಮತ್ತು ಒಕ್ಕೂಟ ವ್ಯವಸ್ಥೆ ಕುರಿತಾದ ಗೋಷ್ಠಿಗೆ ಠಾಕೂರರು ಅಧ್ಯಕ್ಷತೆ ವಹಿಸಲಿದ್ದಾರೆ.

ರಾಜ್ಯಪಾಲರು ರೂಪಿಸಿರುವ ಅಂತಿಮ ವರದಿಯಲ್ಲಿ ದೋಸ್ತಿ ಪಕ್ಷಗಳಾದ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರೊಂದಿಗೆ ನಡೆಸಿದ ಚರ್ಚೆ ಹಾಗೂ ಅವರ ಹಿಂದಿನ ನಿಲುವುಗಳನ್ನು ವರದಿಯಲ್ಲಿ ದಾಖಲಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ರಾಜ್ಯಪಾಲರು ಕೇಂದ್ರ ಗೃಹ ಸಚಿವ ಶಿವರಾಜಪಾಟೀಲ್ ಅವರಿಗೆ ರಾಜ್ಯದ ರಾಜಕೀಯ ಬೆಳವಣಿಗೆಗಳನ್ನು ವಿವರಿಸಿದರೆನ್ನಲಾಗಿದೆ.

ರಾಜ್ಯಪಾಲರು ಬುಧವಾರ ರಾತ್ರಿ ದೆಹಲಿಯಿಂದ ಹಿಂದಿರುಗಲಿದ್ದಾರೆ.
ಮತ್ತಷ್ಟು
ದೆಹಲಿಯಲ್ಲಿ ಬಿರುಸುಗೊಂಡ ಕರ್ನಾಟಕ ರಾಜಕೀಯ
ರಾಜ್ಯಪಾಲರಿಂದ ಪಾಟೀಲ್ ಭೇಟಿ
ರಾಜ್ಯ ರಾಜಕಾರಣ: ಕೇಂದ್ರ ನಿರ್ಧಾರ ಇಂದು
ಅವಕಾಶವಾದಿ ರಾಜಕಾರಣದ ವಿರುದ್ದ ಜನಾಂದೋಲನ:ಕಾಂಗ್ರೆಸ್
ಆರ್ಎಸ್ಎಸ್ ಕಾರ್ಯಕಾರಿಣಿ ಮಹತ್ವದ ನಿರ್ಣಯಗಳು
ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ಧತೆ