ರಾಜ್ಯದಲ್ಲಿನ 5600 ಕ್ಕೂ ಅಧಿಕ ಗ್ರಾ.ಪಂ. ಗಳು ಒಂದು ಸಾವಿರ ಕೋಟಿಗೂ ಅಧಿಕ ಮೊತ್ತದ ವಿದ್ಯುತ್ ಶುಲ್ಕ ಬಾಕಿ ಉಳಿಸಿಕೊಂಡಿವೆ ಎಂದು ಕೆ.ಪಿ.ಟಿ.ಸಿ.ಯಲ್, ವ್ಯವಸ್ಥಾಪಕ ನಿರ್ದೇಶಕ ಭರತ್ ಲಾಲ್ ಮೀನಾ ಹೇಳಿದ್ದಾರೆ.
ನೂತನವಾಗಿ ಆರಂಭಗೊಂಡ (ಡಿ.ಎಸ್.ಎಂ) ಡಿಮ್ಯಾಂಡ್ ಸೈಡ್ ಮ್ಯಾನೇಜಮೆಂಟ್ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಗ್ರಾ.ಪಂ. ಸಿಬ್ಬಂದಿಗೆ ವಿದ್ಯುತ್ ಉಳಿತಾಯ ಮಾಡುವ ಕುರಿತಂತೆ ಕಾರ್ಯಕ್ರಮ ಹಮ್ಮಿಕೊಳ್ಳಲು ಯೋಜಿಸಿರುವುದಾಗಿ ಹೇಳಿದರು.
ಪಟ್ಟಣ ಪಂಚಾಯತಿ ಮತ್ತು ಗ್ರಾಮ ಪಂಚಾಯತಿಗಳು ನೀರು ಸರಬರಾಜು ಮಾಡುವ ಮೋಟರ್‌ಗಳನ್ನು ಅವೈಜ್ಞಾನಿಕವಾಗಿ ಬಳಸಲಾಗುತ್ತಿದೆ. ಈ ಸಿಬ್ಬಂದಿಗೆ ಸೂಕ್ತ ತರಬೇತಿಯ ಅಗತ್ಯವಿದೆ ಎಂದರು.
ನೀರು ಸರಬರಾಜು ಮಾಡುವ ಎಲ್ಲ ಮೋಟಾರ್ ಪಂಪಸೆಟ್‌ಗಳಿಗೆ ಕಡ್ಡಾಯವಾಗಿ ಮೀಟರ್ ಅಳವಡಿಸಲಾಗುವುದು. ಮುಂದೆ ಬೀದಿ ದೀಪಗಳಿಗೂ ಮೀಟರ್ ಅಳವಡಿಸಲಾಗುವುದು. ಇಲಾಖೆ ಈ ದಿಸೆಯಲ್ಲಿ ಈಗಾಗಲೇ ಕಾರ್ಯೋನ್ಮಖವಾಗಿದೆ ಎಂದು ಹೇಳಿದರು.
|