ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
24 ಗಂಟೆಗಳಲ್ಲಿ ಬಹುಮತ ಸಾಬೀತು: ಯಡಿಯೂರಪ್ಪ
ತಮಗೆ ಸರ್ಕಾರ ರಚನೆಗೆ ಅವಕಾಶ ನೀಡಿದ್ದೇ ಆದರೆ 24 ಗಂಟೆಗಳಲ್ಲಿ ಬಹುಮತ ಸಾಬೀತು ಮಾಡುವುದಾಗಿ ಹೊಸ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿತವಾಗಿರುವ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ತಮ್ಮ ಹೊಸ ಸರ್ಕಾರ ರಚನೆಗೆ ತಮ್ಮನ್ನು ಆಹ್ವಾನಿಸುವಂತೆ ಕೋರಿ ಬಿಜೆಪಿ ನಡೆಸಿದ್ದ ಅಹೋರಾತ್ರಿ ಧರಣಿಯಿಂದ ಮಹಾತ್ಮಾಗಾಂಧಿ ಪ್ರತಿಮೆ ಅಪವಿತ್ರವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್‌ನವರು ಪ್ರತಿಮೆಯನ್ನು ಸ್ವಚ್ಛಗೊಳಿಸಿದ್ದನ್ನು ತೀವ್ರವಾಗಿ ಟೀಕಿಸಿದರು.

ಗಾಂಧೀಜಿ ಪ್ರತಿಮೆಯನ್ನು ತೊಳೆಯುವುದರ ಬದಲು ಕಾಂಗ್ರೆಸ್‌ನವರು ತಮ್ಮ ಜೀವಮಾನದಲ್ಲಿ ಮಾಡಿದ ಪಾಪಕರ್ಮಗಳನ್ನು ತೊಳೆದುಕೊಳ್ಳಲಿ ಎಂದು ಲೇವಡಿ ಮಾಡಿದರು.

ರಾಜ್ಯಪಾಲರು ತಮ್ಮನ್ನು ಸರ್ಕಾರ ರಚನೆಗೆ ಆಹ್ವಾನಿಸದಂತೆ ಕಾಂಗ್ರೆಸ್‌ನವರು ಅಡ್ಡಿಪಡಿಸಿದರು. ಅದ್ದರಿಂದಲೇ ತಾವು ರಾಷ್ಟ್ರಪತಿ ಎದರು ಶಾಸಕರನ್ನು ಪರೇಡ್ ಮಾಡಿಸಬೇಕಾಯಿತು ಎಂದು ಅವರು ತಿಳಿಸಿದರು.

ಇದರಿಂದ ತಮ್ಮ ನಿಲುವು ಹಾಗೂ ಸರ್ಕಾರ ರಚನೆಗೆ ತಮಗಿರುವ ಸಂಖ್ಯಾಬಲವನ್ನು ಇಡೀ ವಿಶ್ವಕ್ಕೆ ಸಾಬೀತುಪಡಿಸುವಂತಾಯಿತು ಎಂದು ಅವರು ಹೇಳಿದರು.
ಮತ್ತಷ್ಟು
ಡಿಕೆಶಿ ವಿರುದ್ದ ಪೊಲೀಸರಿಗೆ ದೂರು
ಎಲ್ಲೆಡೆ ದೀಪಾವಳಿ ಕಳೆ: ಹಬ್ಬದ ಉತ್ಸಾಹ
ಪುಟಾಣಿ ಲಕ್ಷ್ಮಿ ಶಸ್ತ್ರಚಿಕಿತ್ಸೆ ಯಶಸ್ವಿ
ಸ್ಥಿರ ಸರಕಾರ ಅಸಾಧ್ಯ:ರಾಜ್ಯಪಾಲರ ವರದಿ
ದೆಹಲಿಗೆ ಶಾಸಕರು: ಗೌಡರ ಅಸಮಾಧಾನ ?
ಸಾವಿರ ಕೋಟಿಗೂ ಅಧಿಕ ವಿದ್ಯುತ್ ಶುಲ್ಕ ಬಾಕಿ