ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ರಾಷ್ಟ್ರಪತಿಗಳ ಸಮ್ಮುಖದಲ್ಲಿ ಶಾಸಕರ ಯಶಸ್ವಿ ಪರೇಡ್
ಜೆಡಿಎಸ್ ಶಾಸಕರಾದ ಬಿ.ಸಿ.ಪಾಟಿಲ್, ಎಚ್.ಡಿ. ರೇವಣ್ಣ, ಸಿ.ಎಸ್. ಪುಟ್ಟೇಗೌಡ ಹಾಗೂ ಮೆರಾಜುದ್ದೀನ್ ಹೊರತುಪಡಿಸಿ ಉಳಿದ 125 ಜೆಡಿಎಸ್ ಹಾಗೂ ಬಿಜೆಪಿ ಶಾಸಕರು ದೆಹಲಿಯಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಎದುರು ಮಂಗಳವಾರ ಸಂಜೆ ನಡೆದ ಪರೇಡ್ ನಲ್ಲಿ ಹಾಜರಾಗಿದ್ದರು.

ಈ ಮೂಲಕ ಸರ್ಕಾರ ರಚನೆಗೆ ತಮಗೆ ಸ್ಪಷ್ಟ ಸಂಖ್ಯಾಬಲವಿದೆ ಎಂಬುದನ್ನು ರಾಷ್ಟ್ರಪತಿಯವರಿಗೆ ಮನವರಿಕೆ ಮಾಡಿಕೊಟ್ಟರು.

ಸಂಖ್ಯಾಬಲವಿದ್ದರೂ ಸರ್ಕಾರ ರಚನೆಗೆ ತಮಗೆ ಅವಕಾಶ ಕೊಡುತ್ತಿಲ್ಲ ಎಂದು ದೇಶದ ಗಮನ ಸೆಳೆಯಲು ರಾಷ್ಟ್ರಪತಿಯವರ ಮುಂದೆ 125 ಶಾಸಕರು ಪರೇಡ್ ನಡೆಸಿದರು. ಈ ಮೂಲಕ ಕೇಂದ್ರದ ಮೇಲೆ ಒತ್ತಡ ತರಲಾಯಿತು.

ರಾಷ್ಟ್ರಪತಿಯವರೂ ಸಹಾ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

ಬೊಮ್ಮಾಯಿ ಮತ್ತು ಬಿಹಾರದ ರಾಮೇಶ್ವರ ಪ್ರಸಾದ್ ಅವರ ಪ್ರಕರಣಗಳ ಕುರಿತ ಸುಪ್ರೀಂಕೋರ್ಟ್ ನೀಡಿರುವ ತೀರ್ಪುಗಳ ಆಶಯಗಳನ್ನು ಮಾನ್ಯಮಾಡಿ ಸಂವಿಧಾನದ ಪ್ರಕಾರ ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದ ರಚನೆಗೆ ಅನುವು ಮಾಡಿಕೊಡುವಂತೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರನ್ನು ಆಗ್ರಹಪಡಿಸಿದ್ದಾರೆ.

ಎರಡು ಪುಟಗಳ ಮನವಿ ಪತ್ರದ ಜೊತೆಗೆ ಮೈತ್ರಿ ಸರ್ಕಾರವನ್ನು ಬೆಂಬಲಿಸುವ ಎಲ್ಲ ಶಾಸಕರ ಸಹಿಗಳು ಮತ್ತು ಜಾತ್ಯತೀತ ದಳ ಶಾಸಕಾಂಗ ಪಕ್ಷ ನೀಡಿರುವ ಬೇಷರತ್ ಬೆಂಬಲ ಸೂಚಿಸಿ ರಾಜ್ಯಪಾಲರಿಗೆ ಸಲ್ಲಿಸಿದ ಬೆಂಬಲ ಪತ್ರವನ್ನು ರಾಷ್ಟ್ರಪತಿಯವರಿಗೆ ಸಲ್ಲಿಸಲಾಗಿದೆ.
ಮತ್ತಷ್ಟು
24 ಗಂಟೆಗಳಲ್ಲಿ ಬಹುಮತ ಸಾಬೀತು: ಯಡಿಯೂರಪ್ಪ
ಡಿಕೆಶಿ ವಿರುದ್ದ ಪೊಲೀಸರಿಗೆ ದೂರು
ಎಲ್ಲೆಡೆ ದೀಪಾವಳಿ ಕಳೆ: ಹಬ್ಬದ ಉತ್ಸಾಹ
ಪುಟಾಣಿ ಲಕ್ಷ್ಮಿ ಶಸ್ತ್ರಚಿಕಿತ್ಸೆ ಯಶಸ್ವಿ
ಸ್ಥಿರ ಸರಕಾರ ಅಸಾಧ್ಯ:ರಾಜ್ಯಪಾಲರ ವರದಿ
ದೆಹಲಿಗೆ ಶಾಸಕರು: ಗೌಡರ ಅಸಮಾಧಾನ ?