ಶಾಸಕರ ಸಂಖ್ಯಾಬಲವಿದ್ದರೂ ತಮ್ಮನ್ನು ಸರ್ಕಾರ ರಚನೆಗೆ ಆಹ್ವಾನಿಸಲಿಲ್ಲ ಎಂದು ದೋಸ್ತಿಪಕ್ಷಗಳು ಅದರಲ್ಲೂ ಬಿಜೆಪಿ ಮುಖಂಡರು ಉರಿದು ಬೀಳುತ್ತಿದ್ದಾಗ ರಾಜ್ಯಪಾಲರು ರಾಜ್ಯದಲ್ಲಿ ರಾಜಕೀಯ ಪರಿಸ್ಥಿತಿ ಬಗ್ಗೆ ಸುಪ್ರೀಂಕೋರ್ಟ್ ಹಾಗೂ ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿಗಳ ಜತೆ ಕಾನೂನು ತೊಡಕುಗಳ ಬಗ್ಗೆ ಸಮಾಲೋಚನೆಯಲ್ಲಿ ತೊಡಗಿದ್ದರು.
ನ್ಯಾಯಮೂರ್ತಿಗಳ ಅಭಿಪ್ರಾಯವನ್ನೂ ಸಹಾ ಕೇಂದ್ರ ಸರ್ಕಾರಕ್ಕೆ ನೀಡಿರುವ ಅಂತಿಮ ವರದಿಯಲ್ಲಿ ರಾಜ್ಯಪಾಲರು ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.
ಸರ್ಕಾರ ರಚನೆಗೆ ಹಸಿರು ನಿಶಾನೆ ತೋರಿರುವ ರಾಜ್ಯಪಾಲರು ಕೆಲ ಕಾನೂನಾತ್ಮಕ ಅಂಶಗಳನ್ನು ಎತ್ತಿದ್ದಾರೆ ಎನ್ನಲಾಗಿದೆ. ತಾವು ವರದಿ ರೂಪಿಸುವಲ್ಲಿ ಹೆಚ್ಚು ಸಮಯ ತೆಗೆದುಕೊಂಡಿದ್ದನ್ನು ಸವ್ಮರ್ಥಿಸಿಕೊಂಡಿದ್ದಾರೆ.
ಸುದೀರ್ಘ ಸಮಾಲೋಚನೆ ಮತ್ತು ಎಲ್ಲ ಅಂಶಗಳು ಹಾಗೂ ಆಯಾಮಗಳ ಕುರಿತ ಪರೀಶೀಲನೆಯಿಂದಾಗಿ ಇಷ್ಟು ಸಮಯ ಹಿಡಿಯಿತು ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇಂತಹ ಸಂವಿಧಾನಿಕ ಜವಾಬ್ದಾರಿಯ ನಿರ್ವಹಣೆಯನ್ನು ಅವಸರದಲ್ಲಿ ಮಾಡುವುದು ಸಲ್ಲದು. ಎಲ್ಲ ಮಗ್ಗುಲುಗಳನ್ನೂ ಪರಾಮರ್ಶಿಸಲೇ ಬೇಕು ಎಂದು ಅವರು ಹೇಳಿದ್ದಾರೆ.
|