ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಬಿಜೆಪಿಗೆ ಪಾಲಿಗೆ ಕಹಿ ದೀಪಾವಳಿಯೇ?
ಬಿಜೆಪಿಗೆ ಪಾಲಿಗೆ ಇದು ಕಹಿ ದೀಪಾವಳಿಯಾಗಲಿದೆಯೇ? ರಾಜ್ಯದ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದರೆ ಅಂತಹ ಲಕ್ಷಣಗಳು ಗೋಚರಿಸುತ್ತದೆ.

ನಿನ್ನೆಯವರೆಗೆ ಬಿಜೆಪಿಗೆ ಬೆಂಬಲವನ್ನು ನೀಡುತ್ತೇವೆ ಎಂದೇ ಹೇಳಿಕೊಂಡಿದ್ದ ಜೆಡಿಎಸ್ ದಿಢೀರನೇ ತನ್ನ ನಿಲುವಿನಲ್ಲಿ ಬದಲಾವಣೆ ತೋರಿಸಿದೆ. ಮಾಜಿ ಪ್ರಧಾನಿ ದೇವೇಗೌಡ, ನೂತನ ಮೈತ್ರಿ ಸರ್ಕಾರಕ್ಕೆ ಬೆಂಬಲ ಹಿಂತೆಗೆದುಕೊಳ್ಳುವ ಇರಾದೆ ವ್ಯಕ್ತಪಡಿಸಿದ್ದಾರೆ. ಈ ಹಠಾತ್ ಬೆಳವಣಿಗ ಬಿಜೆಪಿ ವಲಯಯಲ್ಲಿ ತಲ್ಲಣ ಉಂಟು ಮಾಡಿದೆ.

ಪಕ್ಷದ ಎಲ್ಲ ಶಾಸಕರನ್ನು ಖುದ್ದು ಸಂಪರ್ಕಿಸುತ್ತಿರುವ ಗೌಡರು, ಬಿಜೆಪಿಗೆ ನೀಡಿರುವ ಬೆಂಬಲ ಹಿಂತೆಗೆದುಕೊಳ್ಳುವ ಪ್ರಮಾಣ ಪತ್ರಕ್ಕೆ ಸಹಿಮಾಡುವಂತೆ ಶಾಸಕರನ್ನು ಒತ್ತಾಯಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಈ ನಡುವೆ ದೇವೇಗೌಡರ ಪುತ್ರ ರೇವಣ್ಣ, ಶ್ರವಣಬೆಳಗೊಳ ಶಾಸಕ ಸಿ.ಎಸ್. ಪುಟ್ಟೇಗೌಡ ಮತ್ತು ಪಾಂಡವಪುರ ಶಾಸಕ ಪುಟ್ಟರಾಜು ಮಾತ್ರ ಹೊಸ ಪ್ರಮಾಣ ಪತ್ರಕ್ಕೆ ಸಹಿ ಹಾಕಿದ್ದು, ಉಳಿದವರನ್ನು ಓಲೈಸುತ್ತಿದ್ದಾರೆ ಎಂದು ಬಲ್ಲ ಮೂಲಗಳು ಹೇಳುತ್ತಿವೆ.

ಏತನ್ಮಧ್ಯೆ, ರಾಷ್ಟ್ರಪತಿಗಳ ಮುಂದೆ ಪ್ರದರ್ಶನದಲ್ಲಿ ಪಾಲ್ಗೊಂಡಿರುವ ಬಹುತೇಕ ಜೆಡಿಎಸ್ ಶಾಸಕರು ಗೌಡರ ಕರೆಗೆ ಹೆದರಿ ಯಾವುದೇ ಮೊಬೈಲ್ ಕರೆಗಳನ್ನು ಸ್ವೀಕರಿಸುತ್ತಿಲ್ಲ ಎನ್ನಲಾಗಿದೆ.
ಮತ್ತಷ್ಟು
ಮಹಿಳಾ ಆಯೋಗದಲ್ಲಿ ಅನಗತ್ಯ ಹಸ್ತಕ್ಷೇಪ
ಹೊಸ ಮೈತ್ರಿ ಸರ್ಕಾರ ರಚನೆ ಸದ್ಯಕ್ಕಿಲ್ಲ
ನ್ಯಾಯಮೂರ್ತಿಗಳೊಂದಿಗೆ ರಾಜ್ಯಪಾಲರು ಸಮಾಲೋಚನೆ
ರಾಷ್ಟ್ರಪತಿಗಳ ಸಮ್ಮುಖದಲ್ಲಿ ಶಾಸಕರ ಯಶಸ್ವಿ ಪರೇಡ್
24 ಗಂಟೆಗಳಲ್ಲಿ ಬಹುಮತ ಸಾಬೀತು: ಯಡಿಯೂರಪ್ಪ
ಡಿಕೆಶಿ ವಿರುದ್ದ ಪೊಲೀಸರಿಗೆ ದೂರು