ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ರಾಷ್ಟ್ರಪತಿ ಆಳ್ವಿಕೆಗೆ ತೆರೆ;ಸರಕಾರ ರಚನೆಗೆ ಸಿದ್ದತೆ.
ರಾಜ್ಯಪಾಲ ರಾಮೇಶ್ವರ್ ಠಾಕೂರ್ ಅವರ ಅಂತಿಮ ವರದಿಯನ್ನು ಪರಿಶೀಲಿಸಿದ ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿ ರಾಜ್ಯದಲ್ಲಿ ಹೇರಲಾದ ರಾಷ್ಟ್ರಪತಿ ಆಳ್ವಿಕೆಯನ್ನು ಹಿಂತೆಗೆದುಕೊಂಡಿದೆ.

ಇದೊಂದು ಸುದಿನ. ಕೇವಲ ಭಾರತೀಯ ಜನತಾ ಪಕ್ಷಕ್ಕೆ ಮಾತ್ರವಲ್ಲದೇ ರಾಜ್ಯದಲ್ಲಿ ಜನಪರ ಅಡಳಿತ ಬಯಸುವ ಜನತೆಗೆ ದೀಪಾವಳಿ ಕೊಡುಗೆಯಾಗಿದೆ. ಎಂದು ಪಕ್ಷದ ವಕ್ತಾರ ಸುರೇಶ್ ಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಬಿಜೆಪಿಗೆ ಕೊಟ್ಟ ಮಾತಿನಂತೆ ಅಧಿಕಾರ ವರ್ಗಾಯಿಸಲು ಜೆಡಿಎಸ್ ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ ರಾಜಕೀಯ ಬಿಕ್ಕಟ್ಟು ಉಲ್ಬಣಿಸಿ ಜೆಡಿಎಸ್‌ ಸುಪ್ರೀಮೋ ದೇವೇಗೌಡ ಮತ್ತು ಬಿಜೆಪಿ ನಡುವಣ ಕಲಹ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬರಲು ಕಾರಣವಾಗಿತ್ತು.

ಕಾಂಗ್ರೆಸ್‌ನೊಂದಿಗೆ ಕೈಜೋಡಿಸಲು ಯತ್ನಿಸಿದ ಜೆಡಿಎಸ್‌ಗೆ ಮುಖಭಂಗವಾಗಿ ಅಂತಿಮವಾಗಿ ದಾರಿ ಕಾಣದೇ ಬಿಜೆಪಿಗೆ ಬೆಂಬಲ ನೀಡಲು ನಿರ್ಧರಿಸಿತ್ತು.

ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ರಾಜ್ಯಪಾಲ ರಾಮೇಶ್ವರ ಠಾಕೂರ್ ಸಮ್ಮುಖದಲ್ಲಿ ಪರೇಡ್ ಮಾಡಿದರೂ ಸರಕಾರ ರಚನೆಗೆ ವಿಳಂಬವಾಗುತ್ತಿರುವುದರಿಂದ ಯಾವುದೇ ಪ್ರಯೋಜನೆ ಕಾಣದೇ ರಾಷ್ಟ್ರಪತಿಗಳ ಮುಂದೆ ಪರೇಡ್ ಮಾಡಿದ್ದಲ್ಲದೇ ಪ್ರಧಾನಿಯವರನ್ನು ಭೇಟಿ ಮಾಡಿ ಸರಕಾರ ರಚನೆಗೆ ಅಹ್ವಾನಿಸಬೇಕೆಂದು ಒತ್ತಾಯಿಸಿದರು.

ಸಂವಿಧಾನದ ಕಾನೂನುಗಳನ್ನು ಪರಿಶೀಲಿಸಿ ಮುಂದುವರೆಯಲಾಗುವುದು ಎಂದು ಪ್ರಧಾನಿಗಳು ಭರವಸೆ ನೀಡಿದ್ದರು. ಅದರಂತೆ ಇಂದು ನಡೆದ ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿ ರಾಷ್ಟ್ರಪತಿ ಅಡಳಿತವನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದೆ.
ಮತ್ತಷ್ಟು
ಬಿಜೆಪಿಗೆ ಪಾಲಿಗೆ ಕಹಿ ದೀಪಾವಳಿಯೇ?
ಮಹಿಳಾ ಆಯೋಗದಲ್ಲಿ ಅನಗತ್ಯ ಹಸ್ತಕ್ಷೇಪ
ಹೊಸ ಮೈತ್ರಿ ಸರ್ಕಾರ ರಚನೆ ಸದ್ಯಕ್ಕಿಲ್ಲ
ನ್ಯಾಯಮೂರ್ತಿಗಳೊಂದಿಗೆ ರಾಜ್ಯಪಾಲರು ಸಮಾಲೋಚನೆ
ರಾಷ್ಟ್ರಪತಿಗಳ ಸಮ್ಮುಖದಲ್ಲಿ ಶಾಸಕರ ಯಶಸ್ವಿ ಪರೇಡ್
24 ಗಂಟೆಗಳಲ್ಲಿ ಬಹುಮತ ಸಾಬೀತು: ಯಡಿಯೂರಪ್ಪ