ಬಿಜೆಪಿಯ ಪಾಲಿಗೆ ಇಂದು ಕಹಿ ದೀಪಾವಳಿ. ನಿನ್ನೆಯವರೆಗೆ ಬಿಜೆಪಿಗೆ ಬೆಂಬಲವನ್ನು ನೀಡುತ್ತೇವೆ ಎಂದೇ ಹೇಳಿಕೊಂಡಿದ್ದ ಜೆಡಿಎಸ್ ದಿಢೀರನೇ ತನ್ನ ನಿಲುವಿನಲ್ಲಿ ಬದಲಾವಣೆ ತೋರಿಸಿದೆ.
ಮಾಜಿ ಪ್ರಧಾನಿ ದೇವೇಗೌಡ, ನೂತನ ಮೈತ್ರಿ ಸರ್ಕಾರಕ್ಕೆ ಬೆಂಬಲ ಹಿಂತೆಗೆದುಕೊಳ್ಳುವ ಭರವಸೆ ವ್ಯಕ್ತಪಡಿಸಿದ್ದಾರೆ.
ಈ ಹಠಾತ್ ಬೆಳವಣಿಗ ಬಿಜೆಪಿ ವಲಯ ಯಲ್ಲಿ ತಲ್ಲಣ ಉಂಟು ಮಾಡಿದೆ. ಪಕ್ಷದ ಎಲ್ಲ ಶಾಸಕರನ್ನು ಖುದ್ದು ಸಂಪರ್ಕಿಸುತ್ತಿರುವ ಗೌಡರು,ಬಿಜೆಪಿಗೆ ನೀಡಿರುವ ಬೆಂಬಲ ಹಿಂತೆಗೆದುಕೊಳ್ಳುವ ಪ್ರಮಾಣ ಪತ್ರಕ್ಕೆ ಸಹಿಮಾಡುವಂತೆ ದುಂಬಾಲು ಬಿದ್ದಿದ್ದಾರೆ ಎನ್ನಲಾಗಿದೆ.
ಈ ನಡುವೆ ದೇವೇಗೌಡರ ಪುತ್ರ ರೇವಣ್ಣ, ಶ್ರವಣಬೆಳಗೊಳ ಶಾಸಕ ಸಿ.ಎಸ್. ಪುಟ್ಟೇಗೌಡ ಮತ್ತು ಪಾಂಡವಪುರ ಶಾಸಕ ಪುಟ್ಟರಾಜು ಮಾತ್ರ ಹೊಸ ಪ್ರಮಾಣ ಪತ್ರಕ್ಕೆ ಸಹಿ ಹಾಕಿದ್ದು, ಉಳಿದವರನ್ನು ಓಲೈಸುತ್ತಿದ್ದಾರೆ.
ಈ ನಡುವೆ ಬಹುತೇಕ ಜೆಡಿಎಸ್ ಶಾಸಕರು ಗೌಡರ ಕರೆಗೆ ಹೆದರಿ ಮೊಬೈಲ್ ಯಾವುದೇ ಕರೆಗಳನ್ನು ಸ್ವೀಕರಿಸುತ್ತಿಲ್ಲ ಎಂದು ಬಲ್ಲ ಮೂಲಗಳು ತಿಳಿಸಿವೆ.
|