ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಸರಕಾರ ರಚನೆ:ಬಿಜೆಪಿಯಲ್ಲಿ ಸಂಭ್ರಮದ ಅಲೆ
ಕೇಂದ್ರ ಸಚಿವ ಸಂಪುಟ ಗುರುವಾರದಂದು ಕೈಗೊಂಡ ನಿರ್ಧಾರದಿಂದಾಗಿ ರಾಜ್ಯರಾಜಕಾರಣದಲ್ಲಿ ತಲೆದೋರಿದ್ದ ಅನಿಶ್ಚಿತತೆಗೆ ತೆರೆ ಬಿದ್ದಿದ್ದು,ನೂತನ ಮೈತ್ರಿ ಸ ರಕಾರ ರಚನೆಯ ಪ್ರಕ್ರಿಯೆ ಇಂದು ಆರಂಭಗೊಳ್ಳುವ ಮೂಲಕ ಬಿಜೆಪಿಯಲ್ಲಿ ಸಂಭ್ರಮದ ಅಲೆ ಎದ್ದಿದೆ.

ಇದೀಗ ಮುಂದಿನ 19ತಿಂಗಳ ಕಾಲ ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಮರು ಮೈತ್ರಿಯ ಸಮ್ಮಿಶ್ರ ಸರಾಕಾರ ಮುನ್ನೆಡೆಸುವ ಕಾರ್ಯಚಟುವಟಿಕೆ ಚುರುಕುಗೊಂಡಿದೆ.

ಕಳೆದ ನಾಲ್ಕು ವಾರಗಳಲ್ಲಿ ರಾಜ್ಯದಲ್ಲಿ ನಡೆದ ಅನಿರೀಕ್ಷಿತ ಅನಿಶ್ಚಿತ ರಾಜಕೀಯ ಬೆಳವಣಿಗೆಗಳು ಈಗ ನಿರ್ದಿಷ್ಟ ದಿಕ್ಕನ್ನು ತಲುಪಿದಂತಾಗಿದೆ.ಸರಕಾರ ರಚನೆ ಆರಂಭದಲ್ಲಿ ಬಿಜೆಪಿ-ಜೆಡಿಎಸ್ ನಡುವೆ ನಡೆದ ಒಪ್ಪಂದದ ಪ್ರಕಾರ ಅಕ್ಟೋಬರ್ 3ರಂದೇ ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿ ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡಬೇಕಾಗಿತ್ತು.

ಆದರೆ ಇದಕ್ಕೂ ಮೊದಲು ಜೆಡಿಎಸ್‌ನಲ್ಲಿ ಅಧಿಕಾರ ಹಸ್ತಾಂತರ ಕುರಿತು ಆರಂಭವಾಗಿದ್ದ ಅಪಸ್ವರ ದೋಸ್ತಿಗಳ ಮೈತ್ರಿಯನ್ನು ಮತ್ತಷ್ಟು ಹದಗೆಡಿಸಿತ್ತು. ಜೆಡಿಎಸ್ ಮೇಲೆ ಒತ್ತಡ ಹೇರುವ ತಂತ್ರವಾಗಿ ಬಿಜೆಪಿಯ ಎಲ್ಲ ಸಚಿವರೂ ಅಕ್ಟೋಬರ್ 2ರಂದೇ ಸಾಮೂಹಿಕ ರಾಜೀನಾಮೆ ಸಲ್ಲಿಸಿದ್ದರು.

ಆ ನಂತರ ನಡೆದದ್ದು ಕ್ಷಿಪ್ರ ರಾಜಕೀಯ ಬೆಳವಣಿಗೆ, ಜೆಡಿಎಸ್ ಹಿರಿಯ ನಾಯಕ ಎಂ.ಪಿ.ಪ್ರಕಾಶ್ ಬಂಡಾಯ, ಜೆಡಿಎಸ್ ವಿಶಾಲ ಯಾತ್ರೆ, ಬಿಜೆಪಿ ಧರ್ಮಯಾತ್ರೆ ಹಾಗೂ ಕಾಂಗ್ರೆಸ್ ಅರಿವು ಯಾತ್ರೆಗಳೆಲ್ಲ ಆರಂಭವಾಗಿದ್ದುವು.ಬಳಿಕ ಮತ್ತೆ ಹಲವಾರು ಆತಂಕ, ಅಪಸ್ವರಗಳ ನಡುವೆ ಮರುಮೈತ್ರಿಗೆ ಚಾಲನೆ ದೂರಕಿತ್ತು.
ಮತ್ತಷ್ಟು
ಬಿಜೆಪಿಗೆ ಬೆಂಬಲ ವಾಪಸ್ ಪಡೆಯಲು ಜೆಡಿಎಸ್ ವರಿಷ್ಠರ ಒತ್ತಡ
ರಾಷ್ಟ್ರಪತಿ ಆಳ್ವಿಕೆಗೆ ತೆರೆ;ಸರಕಾರ ರಚನೆಗೆ ಸಿದ್ದತೆ.
ಬಿಜೆಪಿಗೆ ಪಾಲಿಗೆ ಕಹಿ ದೀಪಾವಳಿಯೇ?
ಮಹಿಳಾ ಆಯೋಗದಲ್ಲಿ ಅನಗತ್ಯ ಹಸ್ತಕ್ಷೇಪ
ಹೊಸ ಮೈತ್ರಿ ಸರ್ಕಾರ ರಚನೆ ಸದ್ಯಕ್ಕಿಲ್ಲ
ನ್ಯಾಯಮೂರ್ತಿಗಳೊಂದಿಗೆ ರಾಜ್ಯಪಾಲರು ಸಮಾಲೋಚನೆ