ಸರ್ಕಾರ ರಚನೆಗೆ ಕೇಂದ್ರ ಸರ್ಕಾರ ಅನುಕೂಲ ಮಾಡಿಕೊಟ್ಟಿರುವ ಬೆನ್ನಲ್ಲೇ ರಚನೆಗೆಯಾಗುವ ಬಿಜೆಪಿ ನೇತೃತ್ವದ ಸರ್ಕಾರ ಜೆಡಿಎಸ್ ವರಿಷ್ಠ ದೇವೇಗೌಡರಿಗೆ ನೋವುಂಟಾಗದಂತೆ ವರ್ತಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ಕಳೆದ ಸೆಪ್ಟೆಂಬರ್ 30ರಿಂದ ನಡೆದ ಘಟನೆಗಳನ್ನು ನೋಡಿದರೆ ಬಿಜೆಪಿ ಮುಖಂಡರ ಆತುರದ ನಿರ್ಧಾರಗಳು ಹಾಗೂ ಹೇಳಿಕೆಗಳಿಂದ ಜನರಲ್ಲಿ ಯಾವ ಭಾವನೆ ಮೂಡಿದೆ ಎಂಬುದನ್ನು ಅವರು ಅರಿತುಕೊಳ್ಳಬೇಕು.
ಇಂಥ ನಾಯಕರಿಂದ ಸರ್ಕಾರ ಅತಂತ್ರವಾಗುವ ಭೀತಿಯನ್ನುಂಟುಮಾಡಬಾರದು ಎಂದು ಸಲಹೆ ನೀಡಿದ್ದಾರೆ. ತಮ್ಮ ನಡತೆಯನ್ನು ಅವರು ಪರೀಶೀಲನೆಗೆ ಒಳಪಡಿಸಕೊಳ್ಳಬೇಕು, ದೇವೇಗೌಡರ ಮಾರ್ಗದರ್ಶನದಲ್ಲಿ ರಾಜ್ಯದ ಜನತೆಗೆ ಉತ್ತಮ ಆಡಳಿತ ನೀಡಬೇಕು ಎಂದು ಅವರು ಕೋರಿದ್ದಾರೆ.
ರಾಷ್ಟ್ತ್ರಪತಿ ಆಡಳಿತ ಅಂತ್ಯಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿರುವುದನ್ನು ಸ್ವಾಗತಿಸಿದ್ದಾರೆ.
ಬಿಜೆಪಿ ಮುಖಂಡರ ವರ್ತನೆಯಿಂದ ತಮಗೆ ಮಾನಸಿವಾಗಿ ನೋವಾಗಿದೆ ಎಂಬುದನ್ನು ಆ ಪಕ್ಷದ ಮುಖಂಡರು ಗಮನಹರಿಸಬೇಕಾಗಿದೆ ಎಂದರು.
|