ರಾಜ್ಯದ 25ನೇ ಮುಖ್ಯಮಂತ್ರಿಯಾಗಲು ಬಿಜೆಪಿ ಹಿರಿಯ ನಾಯಕ ಯಡ್ಯೂರಪ್ಪ ಸಿದ್ಧತೆ ನಡೆಸಿರುವಂತೆಯೇ, ರಾಜ್ಯಪಾಲರು ಹೊಸ ಮೈತ್ರಿಕೂಟ ಸರಕಾರ ರಚನೆಗೆ ಸೋಮವಾರ ಆಹ್ವಾನ ನೀಡುವ ಸಾಧ್ಯತೆಗಳಿವೆ.
ಹೊಸ ಸರಕಾರದ ಸ್ಥಾಪನೆ ಕುರಿತಂತೆ ಇಂದು ಭಾವೀ ಮುಖ್ಯಮಂತ್ರಿ ಯಡ್ಯೂರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು ರಾಜ್ಯಪಾಲರನ್ನು ಭೇಟಿಯಾಗಲಿದ್ದಾರೆ.
ಮತ್ತೆ ಒಂದುಗೂಡಿರುವ ಬಿಜೆಪಿ-ಜೆಡಿಎಸ್ ಮರುಮೈತ್ರಿ ಸರಕಾರದ ಪ್ರಮಾಣ ವಚನ ಸಮಾರಂಭ ಸೋಮವಾರವೇ ನಡೆಯುವ ಸಾಧ್ಯತೆಯಿದ್ದು, ದಕ್ಷಿಣ ಭಾರತದಲ್ಲಿ ಮೊತ್ತ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಯಡ್ಯೂರಪ್ಪ ಪ್ರಮಾಣವಚನ ಸ್ವೀಕರಿಸುವುದು ಬಹುತೇಕ ಖಚಿತವಾಗಿದೆ.
ಮುಖ್ಯಮಂತ್ರಿಯಾಗಲು ಹೊರಟಿರುವ ಬೆಂಗಳೂರಿನ ಯಡ್ಯೂರಪ್ಪ ನಿವಾಸದಲ್ಲಿ ಈ ಬಾರಿಯ ದೀಪಾವಳಿ ಈ ಹಿಂದಿನಿಂದ ವಿಭಿನ್ನವಾಗಿ ಅದ್ದೂರಿಯಾಗಿ ಆಚರಿಸಲಾಗುತ್ತಿದೆ.
ರಾಜ್ಯದ ವಿವಿಧ ಮೂಲೆಗಳಿಮದ ಆಗಮಿಸುತ್ತಿರುವ ಯಡಿಯೂರಪ್ಪ ಅಭಿಮಾನಿಗಳು ಅವರ ಬೆಂಗಳೂರಿನ ನಿವಾಸದಲ್ಲಿ ಜಮಾಯಿಸಿದ್ದಾರೆ. ರಾಜ್ಯದೆಲ್ಲೆಡೆ ಬಿಜೆಪಿ ಕಾರ್ಯಕರ್ತರು ವಿಜಯೋತ್ಸಾಹ ಆಚರಿಸುತ್ತಿದ್ದಾರೆ.
|