ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಸರಕಾರ ರಚನೆಗೆ ಸಿದ್ಧತೆ: ಖಾತೆಗಾಗಿ ಲಾಬಿ ಆರಂಭ
ಮತ್ತೆ ಒಂದಾಗಿರುವ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರ ರಚನೆಗೆ ಅತಿ ದೊಡ್ಡ ಪಕ್ಷವಾದ ಬಿಜೆಪಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರನ್ನು ರಾಜ್ಯಪಾಲರು ಆಹ್ವಾನಿಸಿರುವಂತೆಯೇ ಭಾವೀ ಸರಕಾರದ ಖಾತೆಗಳಿಗಾಗಿ ಲಾಬಿ ಆರಂಭವಾಗಿದೆ.

ಈ ಹಿನ್ನೆಲೆಯಲ್ಲಿ ರಾಜ್ಯಪಾಲರನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಬಿ.ಎಸ್. ಯಡಿಯೂರಪ್ಪ ಅವರು ಶುಕ್ರವಾರ ಸಂಜೆ ಭೇಟಿಯಾಗಿ ಮಾತುಕತೆ ನಡೆಸುವರು.

ಪಕ್ಷಗಳ ಮುಖಂಡರೊಂದಿಗೆ ಚರ್ಚಿಸಿ ನೂತನ ಮುಖ್ಯಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪ ಅವರು ಪ್ರಮಾಣ ವಚನ ಸ್ವೀಕರಿಸುವ ದಿನಾಂಕವನ್ನು ನಿಗದಿಪಡಿಸಿ ಅವರು ರಾಜ್ಯಪಾಲರಿಗೆ ತಿಳಿಸಲಿದ್ದಾರೆ.

ಇದರೊಂದಿಗೆ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳಲ್ಲಿ ಸಂತಸ ಮೂಡಿದೆ. ಈ ಸುದ್ದಿ ತಿಳಿದ ತಕ್ಷಣ ಸಹಿ ತಿಂಡಿ ವಿತರಣೆಯಾಯಿತು.

ಇದೀಗ ಯಾರಿಗೆ ಯಾವ ಖಾತೆ ನೀಡಬೇಕು ಎಂಬುದರ ಬಗ್ಗೆ ಉಭಯ ಪಕ್ಷಗಳಲ್ಲಿ ಲಾಬಿ ಆರಂಭವಾಗಿದೆ. ರಾಜ್ಯಪಾಲರನ್ನು ಬಿಜೆಪಿ ಟೀಕಿಸಿದ ಹಿನ್ನೆಲೆಯಲ್ಲಿ ತಮಗೆ ವ್ಯತಿರಿಕ್ತವಾಗಿ ಕೇಂದ್ರ ಸರ್ಕಾರಕ್ಕೆ ವರದಿ ನೀಡಬಹುದೆಂಬ ಆತಂಕ ಬಿಜೆಪಿ ಪಾಳಯದಲ್ಲಿತ್ತು. ರಾಜ್ಯಪಾಲರ ಕರೆಯಿಂದ ಆ ಆತಂಕ ದೂರವಾಗಿದೆ.

ಬಿಜೆಪಿ ಪಾಳಯದಲ್ಲಿ ಸಂತಸ ಮೂಡಿರುವ ಬೆನ್ನಲ್ಲೇ ಸಚಿವರ ಖಾತೆಗಳಿಗೆ ಲಾಬಿ ಶುರುವಾಗಿದೆ. ಬಿಜೆಪಿಯ ರಾಷ್ಟ್ರೀಯ ಮುಖಂಡರ ಕಡೆಯಿಂದ ಶಿಫಾರಸು ಮಾಡಿಸುವ ಕಾರ್ಯಕ್ಕೆ ಕೆಲವರು ಮುಂದಾಗಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸರ್ಕಾರ ರಚನೆ ಹಾಗೂ ಆಡಳಿತ ಸುಗಮವಾಗಿ ಸಾಗುವಂತಾಗಲಿ ಹಾಗೂ ಆಡಳಿತದಲ್ಲಿ ದೇವೇಗೌಡರ ಹಸ್ತಕ್ಷೇಪವಿಲ್ಲದಿರಲಿ ಎಂದು ಕೆಲ ಮುಖಂಡರ ಆಶಯವಾಗಿದೆ.
ಮತ್ತಷ್ಟು
ಸೋಮವಾರ ಹೊಸ ಸರಕಾರ ಅಸ್ತಿತ್ವಕ್ಕೆ
ನರಕಚತುರ್ದಶಿ ದಿನ ಕಳವು ಮಾಡುವ ಮೂಢನಂಬಿಕೆ
ದೇವೇಗೌಡರ ಮನಸಿಗೆ ನೋವುಂಟಾಗುವಂತೆ ವರ್ತಿಸಬೇಡಿ
ಸರಕಾರ ರಚನೆ:ಬಿಜೆಪಿಯಲ್ಲಿ ಸಂಭ್ರಮದ ಅಲೆ
ಬಿಜೆಪಿಗೆ ಬೆಂಬಲ ವಾಪಸ್ ಪಡೆಯಲು ಜೆಡಿಎಸ್ ವರಿಷ್ಠರ ಒತ್ತಡ
ರಾಷ್ಟ್ರಪತಿ ಆಳ್ವಿಕೆಗೆ ತೆರೆ;ಸರಕಾರ ರಚನೆಗೆ ಸಿದ್ದತೆ.