ತಾವು ಮುಖ್ಯಮಂತ್ರಿಯಾಗಬೇಕೆಂಬ ಮಹೋನ್ನತ ಆಶಯ ಈಡೇರುವ ಘಳಿಗೆ ಬಂದಿರುವುದರಿಂದ ಪುಳಕಿತಗೊಂಡ ಯಡ್ಯೂರಪ್ಪ ಅವರು ತಮ್ಮ ನೇತೃತ್ವದ ಸರ್ಕಾರದ ಆಡಳಿತಕ್ಕೆ ಯಾವುದೇ ಧಕ್ಕೆ ಬರದಂತೆ ಭಗವಂತ ಕಾಪಾಡಲಿ ಎಂಬ ಉದ್ದೇಶವಿದ್ದಂತೆ ಹೋಮ ಹವನಗಳಿಗೆ ಶರಣಾಗಿದ್ದಾರೆ.
ಅರ್ಚಕರೊಬ್ಬರ ಮನೆಯಲ್ಲಿ ಯಾಗ ಮಾಡಿದ ಯಡ್ಯೂರಪ್ಪ ಅವರು ಶ್ರೀರಂಗಪಟ್ಟಣದಲ್ಲಿ ಸೂರ್ಯನಾರಾಯಣ ಯಾಗವನ್ನು ಮಾಡುತ್ತಿದ್ದಾರೆ. ಹಾಗೆಯೇ ಶ್ರೀರಂಗಪಟ್ಟಣದ ರಂಗನಾಥ ಸ್ವಾಮಿ ದೇವಾಲಯಕ್ಕೆ ಭೇಟಿ ಮಾಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
|