ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಬಿಜೆಪಿಯಿಂದ ಸಚಿವರು ಯಾರು?: ಆಕಾಂಕ್ಷಿಗಳ ಕಸರತ್ತು
ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿರುವ ಯಡ್ಯೂರಪ್ಪ ಸಂಪುಟದಲ್ಲಿ ಬಿಜೆಪಿಯಲ್ಲಿ ಯಾರು ಸಚಿವರಾಗುತ್ತಾರೆ ಎಂಬ ಬಗ್ಗೆ ಪಕ್ಷದೊಳಗೆ ತೆರೆಮರೆಯ ಕಸರತ್ತು ಆರಂಭವಾಗಿದೆ.

21 ತಿಂಗಳ ಹಿಂದೆ ಅಂಗೀಕಾರಗೊಂಡ ಒಪ್ಪಂದದ ಪ್ರಕಾರವೇ ಈ ಸರ್ಕಾರ ಅಸ್ತಿತ್ವಕ್ಕೆ ಬಂದರೆ, ಬಿಜೆಪಿ ಪಾಲಿಗೆ 16 ಖಾತೆಗಳು ಲಭ್ಯವಾಗಲಿವೆ. ಆದರೆ, ಕೆಲವು ಪ್ರಮುಖ ಖಾತೆಗಳನ್ನು ಬಿಟ್ಟು ಕೊಡಬೇಕೆಂದು ಜೆಡಿಎಸ್ ಪಟ್ಟು ಹಿಡಿದಿದೆ.

ಇದರಿಂದ ಖಾತೆಗಳ ಹಂಚಿಕೆ ಬಿಕ್ಕಟ್ಟು ತಲೆದೋರುವ ಲಕ್ಷಣಗಳಿವೆ. ಈ ಬಾರಿ ಬಿಜೆಪಿ ಹೊಸ ಮುಖಗಳಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ಆರಗ ಜ್ಞಾನೇಂದ್ರ, ವಿಶೇಶ್ವರ ಹೆಗಡೆ ಕಾಗೇರಿ, ಶಂಕರಲಿಂಗೇಗೌಡ, ಮಹಿಳೆಯರ ಪೈಕಿ ಪುತ್ತೂರಿನ ಶಾಸಕಿ ಶಕುಂತಲಾ ಶೆಟ್ಟಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಚಿಂತನೆ ನಡೆದಿದೆ ಎಂದು ಮೂಲಗಳು ಹೇಳಿವೆ.

ಪಕ್ಷದೊಳಗಿನ ಭಿನ್ನಮತವನ್ನು ಶಮನಗೊಳಿಸಲು ಅನಂತ್ ಕುಮಾರ್ ಬಣದ ಸದಸ್ಯರಿಗೂ ಸಮಾನ ಆದ್ಯತೆ ನೀಡಬೇಕು ಎಂಬುದು ಪಕ್ಷದ ಚಿಂತನೆ. ಈ ಕಾರಣದಿಂದ ಅರವಿಂದ ಲಿಂಬಾವಳಿಗೆ ಸಚಿವ ಸ್ಥಾನ ಸಿಗುವ ಎಲ್ಲಾ ಸಾಧ್ಯತೆಗಳಿವೆ.
ಮತ್ತಷ್ಟು
ಸಂಪುಟ ಸೇರಿ: ಪ್ರಕಾಶ್‌ಗೆ ಯಡ್ಯೂರಪ್ಪ ಮನವಿ
ಡಿಸಿಎಂ ಹುದ್ದೆ ಬೇಡ:ಕುಮಾರಸ್ವಾಮಿ
ರಾಜ್ಯಪಾಲರ ಭೇಟಿ: ಸೋಮವಾರ ಪ್ರಮಾಣ
ಏರಿದ ಬೆಲೆಗಳ ನಡುವೆ ಸಡಗರದ ದೀಪಾವಳಿ
ಕುಮಾರ ಅಥವಾ ರೇವಣ್ಣ: ಉಪಮುಖ್ಯಮಂತ್ರಿ ಯಾರು?
ದೇವರಿಗೆ ಮೊರೆ ಹೋದ ಯಡ್ಯೂರಪ್ಪ