ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ರಾಜ್ಯೋತ್ಸವದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಶುಲ್ಕ!
ಹಣ ಸಂಗ್ರಹಕ್ಕೆ ಶಿಕ್ಷಣ ಇಲಾಖೆ ಹೊಸ ದಾರಿಯನ್ನು ಕಂಡು ಕೊಂಡಂತಿದೆ. ಅಚ್ಚರಿಪಡಬೇಡಿ. ರಾಜ್ಯೋತ್ಸವದ ಅಂಗವಾಗಿ ನಡೆದ ಸಾಂಸ್ಕ್ಕತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪುಟಾಣಿಗಳು ಇದೀಗ ಸರ್ಕಾರಕ್ಕೆ ಶುಲ್ಕ ತೆರಬೇಕಾಗಿದೆ.

ಸರ್ಕಾರದ ಈ ಕ್ರಮ ಪೋಷಕರ ಆಕ್ರೋಶಕ್ಕೂ ಕಾರಣವಾಗಿದೆ. ಕರ್ನಾಟಕ ಶಿಕ್ಷಣ ಇಲಾಖೆಯ ವತಿಯಿಂದ ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಮೂರು ದಿನದ ಮಕ್ಕಳ ಸಾಂಸ್ಕ್ಕತಿಕ ಕಾರ್ಯಕ್ರಮವನ್ನು ಹಮ್ಮಿಕೂಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ 1500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇಈ ಪುಟಾಣಿಗಳ ಮೇಲೆ ಶಿಕ್ಷಣ ಇಲಾಖೆಯು ಖರ್ಚು ವೆಚ್ಚದ ಹೆಸರಿನಲ್ಲಿ ತಲಾ 40 ರೂಪಾಯಿ ಶುಲ್ಕವನ್ನು ವಿಧಿಸಿತ್ತು.

ಶಿಕ್ಷಣ ಇಲಾಖೆಯ ಈ ವರ್ತನೆ ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಕನ್ನಡದ ಹೆಸರಿನಲ್ಲಿ ಮಕ್ಕಳಿಂದ ಹಣ ವಸೂಲಿ ಮಾಡಲು ಪ್ರಾರಂಭಿಸಿರುವುದು ಸಾರ್ವತ್ರಿಕ ಟೀಕೆಗೆ ಕಾರಣವಾಗಿದೆ.

ಶಿಕ್ಷಣ ಇಲಾಖೆಯ ಈ ರೀತಿಯ ವರ್ತನೆಗೆ ಮಾಜಿ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ವಿದ್ಯಾರ್ಥಿಗಳಿಂದ ಯಾವುದೇ ರೀತಿಯ ಶುಲ್ಕ ವಸೂಲಾಗದಂತೆ ಸುತ್ತೋಲೆ ಹೊರಡಿಸಬೇಕೆಂದು ಮನವಿ ಮಾಡಿದ್ದಾರೆ.
ಮತ್ತಷ್ಟು
ಬಿಜೆಪಿಯಿಂದ ಸಚಿವರು ಯಾರು?: ಆಕಾಂಕ್ಷಿಗಳ ಕಸರತ್ತು
ಸಂಪುಟ ಸೇರಿ: ಪ್ರಕಾಶ್‌ಗೆ ಯಡ್ಯೂರಪ್ಪ ಮನವಿ
ಡಿಸಿಎಂ ಹುದ್ದೆ ಬೇಡ:ಕುಮಾರಸ್ವಾಮಿ
ರಾಜ್ಯಪಾಲರ ಭೇಟಿ: ಸೋಮವಾರ ಪ್ರಮಾಣ
ಏರಿದ ಬೆಲೆಗಳ ನಡುವೆ ಸಡಗರದ ದೀಪಾವಳಿ
ಕುಮಾರ ಅಥವಾ ರೇವಣ್ಣ: ಉಪಮುಖ್ಯಮಂತ್ರಿ ಯಾರು?