ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ನಾಳೆ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ
ಬೆಂಗಳೂರಿನ ಏಟ್ರಿಯಾ ಹೋಟೆಲ್‌ನಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ 11 ಗಂಟೆಗೆ ನಡೆಯಲಿದೆ. ಮುಂದಿನ ಸರ್ಕಾರ ರಚನೆ , ಉಪಮುಖ್ಯ ಮಂತ್ರಿ ಹುದ್ದೆ ಇವೇ ಮೊದಲಾದ ವಿಚಾರಗಳು ಸಭೆಯಲ್ಲಿ ಚರ್ಚೆಗೆ ಬರಲಿವೆ.

ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಸಭೆಯಲ್ಲಿ ಭಾಗವಹಿಸುವ ಬಗ್ಗೆ ಇನ್ನು ಅಂತಿಮವಾಗಿಲ್ಲ. ಪಕ್ಷದ ರಾಜ್ಯಾದ್ಯಕ್ಷ ಮಿರಾಜುದ್ದೀನ್ ಪಟೇಲ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ ಕುಮಾರಸ್ವಾಮಿ ಹಾಗು ಇತರರು ಭಾಗವಹಿಸಲಿದ್ದಾರೆ.

ಸೋಮವಾರ ಬಿಜೆಪಿ ನೇತೃತ್ವದ ಹೂಸ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರಲಿದೆ. ಜೆಡಿಎಸ್‍ನಿಂದ ಸಚಿವರು ಯಾರಾಗಬೇಕು ಎಂಬ ನಿರ್ದಾರ ಕೈಗೊಳ್ಳುವ ಅಧಿಕಾರವನ್ನು ದೇವೇಗೌಡರು ಕುಮಾರಸ್ವಾಮಿ ಅವರಿಗೆ ನೀಡುವ ಸಾದ್ಯತೆಗಳಿವೆ.

ಈ ಎಲ್ಲಾ ಬೆಳವಣಿಗೆ ನಡುವೆ ಎಂಪಿ ಪ್ರಕಾಶ್ ನಾಳೆ ನಡೆಯುವ ಸಭೆಯಲ್ಲಿ ಭಾಗವಹಿಸಲಿದ್ದಾರೆಯೇ ಎಂಬುದು ಇನ್ನೂ ನಿರ್ಧಾರವಾಗಿಲ್ಲ
ಮತ್ತಷ್ಟು
ಲಕ್ಷ್ಮಿ ದತ್ತು: ಎನ್‌ಜಿಒ ಆಸಕ್ತಿ
ಮಾನಸಿಕ ಅಸ್ವಸ್ಥರಿಗಾಗಿ ಕಾನೂನು ಸೇವಾ ಘಟಕ
ಸಚಿವ ಸ್ಥಾನಗಳ ಹಂಚಿಕೆ: ಉಹಾಪೋಹ
ಸಾಕಾರಗೊಳ್ಳಲಿರುವ ಹೋರಾಟಗಾರನ ಕನಸು
ಅಂತ್ಯಕಂಡ ರಾಜಕೀಯ ದೊಂಬರಾಟ
ಮುಖ್ಯಮಂತ್ರಿಯಾಗಲಿರುವ ಆರ್ಎಸ್ಎಸ್ ಸಾಮಾನ್ಯ ಕಾರ್ಯಕರ್ತ