ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಮರು ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿರುವುದರೊಂದಿಗೆ ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲಿದ್ದ ಅನಿಶ್ಚಿತತೆ ಕೊನೆಗೊಳ್ಳಲಿದೆ.
ಜಯಗಳಿಸಿ 40 ದಿನ ಕಳೆದರೂ ಅತಂತ್ರರಾಗಿ ಉಳಿದಿರುವ ಸ್ಶಳೀಯ ಸಂಸ್ಥೆಗಲ ಚುನಾಯಿತರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ರಾಜ್ಯದಲ್ಲಿನ ರಾಜಕೀಯ ಅನಿಶ್ಚಿತತೆಯಿಂದಾಗಿ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಮೀಸಲಾತಿ ಘೋಷಣೆ ಮಾಡಿರಲಿಲ್ಲ. ಹೀಗಾಗಿ ಜೆಡಿಎಸ್-ಬಿಜೆಪಿ ಬಹುಮತ ಪಡೆದ ಸ್ಥಳೀಯ ಸಂಸ್ಥೆಗಳಲ್ಲೂ ಅಧಿಕಾರ ಗ್ಪ್ರಹಿಸಲು ಸಾಧ್ಯವಾಗಿರಲಿಲ್ಲ.
ಒಂದು ವೇಳೆ ರಾಷ್ಟ್ತ್ರಪತಿ ಆಡಳಿತವೇ ಮುಂದುವರೆದಿದ್ದರೆ ಜೆಡಿಎಸ್-ಬಿಜೆಪಿಗೆ ನಷ್ಟವಾಗುತ್ತಿತ್ತು. ಸ್ಥಳೀಯ ಸಂಸ್ಥೆಗಳಲ್ಲಿ ಯಾವುದೇ ಪಕ್ಷ ಬಹುಮತ ಪಡೆದಿದ್ದರೂ ಅಧ್ಯಕ್ಷ ಅಥವಾ ಉಪಾಧ್ಯಕ್ಷ ಹುದ್ದೆಗೆ ಘೋಷಿತ ಮೀಸಲಾತಿ ಅಭ್ಯರ್ಥಿ ಇಲ್ಲದಿದ್ದರೆ ಆ ಪಕ್ಷಕ್ಕೆ ಹುದ್ದೆ ದೊರೆಯುವುದಿಲ್ಲ. ಒಂದುವೇಳೆ ಪಕ್ಷೇತರರು ಇದ್ದರೆ ಅವರಿಗೆ ಬಿಟ್ಟುಕೊಡಬೇಕಾಗುತ್ತಿತ್ತು.
|