ಅತ್ಯಂತ ಕ್ಲಿಷ್ಟವಾದ ಶಸ್ತ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಳ್ಳುತ್ತಿರುವ ಪುಟ್ಟ ಲಕ್ಷ್ಮಿ ತನ್ನ ಅಮ್ಮನ ಜತೆಯಲ್ಲಿ ಸುಮಾರು ಎರಡು ಗಂಟೆ ಕಾಲ ಕಳೆದಿದ್ದಾಳೆ.
ಚತುರ್ಭುಜಳಾಗಿ ಶಸ್ತ್ತ್ರಚಿಕಿತ್ಸೆಯ ನಂತರ ಸಹಜ ಸ್ಥಿತಿಗೆ ಮರುಳುತ್ತಿರುವ ಲಕ್ಷ್ಮಿಯ ಬಳಿ ತೆರಳಲು ಅವರ ತಾಯಿಗೆ ವೈದ್ಯರು ಅವಕಾಶ ಮಾಡಿಕೊಟ್ಟಿದ್ದರು.
ಕೃತಕ ಉಸಿರಾಟದ ಪರಿಕರಗಳಿಂದಲೂ ಲಕ್ಷ್ಮಿ ಈ ಮುಕ್ತವಾಗಿದ್ದು, ಎಲ್ಲರಂತೆ ಸಹಜವಾಗಿದ್ದಾಳೆ. ಈಗ ಹಾಲು ಸೇವಿಸುತ್ತಿದ್ದಾಳೆ. ಅವಳ ವಿಸರ್ಜನಾ ಪ್ರಕ್ರಿಯೆಯೂ ಸಹಜವಾಗಿದೆ. ಇನ್ನೂ ಆಕೆಯನ್ನೂ ಐಸಿಯುನಲ್ಲಿ ಇಡಲಾಗಿದೆ.
ಶಸ್ತ್ತ್ರಚಿಕಿತ್ಸೆಯ ಗಾಯಗಳು ಮಾಯಲು ಇನ್ನೂ ಸಮಯ ಹಿಡಿಯುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಲಕ್ಷ್ಮಿಗೆ ಶಸ್ತ್ತ್ರಚಿಕಿತ್ಸೆ ನಡೆಸಿ ಅವಳ ಬಾಳಿನಲ್ಲಿ ಆಶಾಕಿರಣ ಮೂಡಿಸಿದ ಬೆಂಗಳೂರಿನ ಸ್ಪರ್ಶ್ ಫೌಂಡೇಷನ್‌ಗೆ ದಾವಣಗೆರೆಯ ಶಾಮನೂರು ಷುಗರ್ಸ್ ಲಿಮಿಟೆಡ್ 7,77,777 ರೂ. ದೇಣಿಗೆ ನೀಡಿದೆ.
ಈ ಹಣವನ್ನು ಲಕ್ಷ್ಮಿ ಅಂಥ ಅಸಹಾಯಕರ ಶಸಸ್ತ್ರಿಚಿಕಿತ್ಸೆಗೆ ಬಳಸಿಕೊಳ್ಳಲಿ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ.
ಸ್ಪರ್ಶ್ ಆಸ್ಪತ್ರೆಯ ಮುಖ್ಯಸ್ಥ ಡಾ. ಶರಣು ಶಿವರಾಜ್ ಪಾಟೀಲ್ ನೇತೃತ್ವದಲ್ಲಿ ಒಂದು ದಿನಕ್ಕೂ ಹೆಚ್ಚು ಕಾಲ ಶಸ್ತ್ರಚಿಕಿತ್ಸೆ ನಡೆಸಿ ಬಾಲಕಿಗೆ ಪುನರ್ಜನ್ಮ ನೀಡಿರುವುದು ಶ್ಲಾಘನೀಯ ಕಾರ್ಯ ಎಂದು ವ್ಶೆದ್ಯತಂಡಕ್ಕೆ ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.
ಶಾಮನೂರು ಷುಗರ್ಸ್ ಲಿ. ಕಂಪನಿ ಅಧಿಕಾರಿಗಳು, ನೌಕರರು ತಮ್ಮ ಒಂದು ದಿನ ವೇತನವನ್ನು ನೀಡಿದ್ದು, ಈ ಹಣ 7,7,77,777 ರೂ.ಗಳಾಗಿದೆ.
|