ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಬಳ್ಳಾರಿ ಘಟನೆ ಸರ್ಕಾರದ ಮೇಲೆ ಪರಿಣಾಮವಿಲ್ಲ್ಲ
ಬಳ್ಳಾರಿಯ ಕೆ.ಕೆ.ಹಾಳ್ನಲ್ಲಿ ತ್ರಿವಳಿ ಕೊಲೆ ಪ್ರಕರಣಗಳ ಬಗ್ಗೆ ಸರ್ಕಾರ ರಚನೆಯಾದ ನಂತರ ಕ್ರಮ ಕೈಗೊಳ್ಳುವುದಾಗಿ ನಿಯೋಜಿತ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ಈ ಪ್ರಕರಣ ಸಮ್ಮಿಶ್ರ ಸರ್ಕಾರ ರಚನೆ ಮೇಲೆ ಯಾವ ಪರಿಣಾಮ ಬೀರುವುದಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಮೆರಾಜುದ್ದೀನ್ ಪಟೇಲ್ ಸ್ಷಷ್ಟಪಡಿಸಿದ್ದಾರೆ.

ಇದು ರಾಜಕೀಯ ವಿಚಾರದಲ್ಲಿ ನಡೆದಿರುವ ಘಟನೆ ಅಲ್ಲ, ವೈಯಕ್ತಿಕ ದ್ವೇಷದಿಂದ ನಡೆದಿರುವ ಘಟನೆ ಎಂದು ತಿಳಿಸಿದ್ದಾರೆ.

ಆದರೆ ನಾವು ದಳದವ್ರು ಎಂದಿದ್ದಕ್ಕೆ ಈ ಕೊಲೆಗಳು ನಡೆದಿವೆ ಎಂದು ಬರ್ಬರವಾಗಿ ಹತ್ಯೆಗೀಡಾದ ಮೂವರು ವ್ಯಕ್ತಿಗಳ ಕುಟುಂಬದ ಸದಸ್ಯರು ಹೇಳಿದ್ದಾರೆ.

ಸಂತ್ರಸ್ತರಿಗೆ ಸಾಂತ್ವನ ಹೇಳಲು ಮೆರಾಜುದ್ದೀನ್ ಪಟೇಲ್ ಬಂದ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತವಾಯಿತು. ಬಿಜೆಪಿಗೆ ಮತ ಹಾಕುವುದಿಲ್ಲ ಎಂದು ಹೇಳಿದ್ದಕ್ಕಾಗಿ, ತಮ್ಮ ಜನಾಂಗದ ವಿರುದ್ಧದ ಷಡ್ಯಂತ್ರ ರೂಪಿಸಿ ಕೊಲೆ ಮಾಡಲಾಗಿದೆ ಎಂದು ಹಲವರು ಆರೋಪಿಸಿದ್ದಾರೆ.

ಈ ಪ್ರಕರಣ ಕುರಿತು ರಾಜ್ಯ ಸಿಒಡಿ ಯಿಂದ ತನಿಖೆ ನಡೆಸುವುದಾಗಿ ಸರ್ಕಾರದ ಮೂಲಗಳು ತಿಳಿಸಿವೆ. ಈಗಾಗಲೇ ಹಿರಿಯ ಪೊಲೀಸ್ ಅಧಿಕಾರಿಗಳು ಕಲ್ಲು ಕುಟಿಗನಹಳ್ಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರೀಶೀಲಿಸಿದ್ದಾರೆ.
ಮತ್ತಷ್ಟು
ಸಚಿವ ಸ್ಥಾನ: ಎಂ.ಪಿ.ಪ್ರಕಾಶ್‌ಗೆ ದುಂಬಾಲು
ಅಮ್ಮನ ಜತೆ ಕಾಲ ಕಳೆದ ಲಕ್ಷ್ಮಿ
ಸರ್ಕಾರ ರಚನೆ: ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಬಚಾವ್
ಕುಮಾರಸ್ವಾಮಿ ಉಪಮುಖ್ಯಮಂತ್ರಿ
ಜೆಡಿಎಸ್ ಸಭೆ:ಡಿಸಿಎಂ ಆಯ್ಕೆ ಇಂದು
ನಾಳೆ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ