ಬಿಜೆಪಿಯ ಬಹುದಿನಗಳ ಕನಸು ನನಸಾಗಿದ್ದು, ಇಂದು ಸರಕಾರ ರಚನೆಗೆ ಕ್ಷಣಗಣನೆ ನಡೆಯುತ್ತಿದೆ. ದಕ್ಷಿಣ ಭಾರತದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಅವರು ಪದಗ್ರಹಣ ಮಾಡಲಿದ್ದು, ಅವರೊಂದಿಗೆ ಸಚಿವರಾಗಿ ಬಿಜೆಪಿ ಶಾಸಕರಾದ ಜಗದೀಶ್ ಶೆಟ್ಟರ್, ವಿ.ಎಸ್.ಆಚಾರ್ಯ, ಗೋವಿಂದ ಕಾರಜೋಳ ಮತ್ತು ಆರ್.ಅಶೋಕ್ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಬಿಜೆಪಿ ಕಾರ್ಯಕರ್ತರ ದಂಡು ತಂಡೋಪತಂಡವಾಗಿ ಆಗಮಿಸಿದ್ದು, ಈ ಸಮಾರಂಭ ಶಾಂತಯುತ ಮತ್ತು ಸುಗಮವಾಗಿ ಸಾಗಲು ಎಲ್ಲಾ ರೀತಿಯ ಬಿಗಿ ಭದ್ರತೆ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ
ಪೂರಕ ಸುದ್ದಿ: ಜೆಡಿಎಸ್ ಸಚಿವರು, ಉಪಮುಖ್ಯಮಂತ್ರಿ ನ.15ರ ಬಳಿಕ ಘೋಷಣೆ
|