ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ರಾಜ್ಯಪಾಲರಿಂದ ಕನ್ನಡ; ಎಲ್ಲೆಡೆ ಕೇಸರಿಮಯ
ಯಾವನು ಕನಸು ಕಾಣಬಲ್ಲನೋ ಅವನು ಯಶಸ್ಸನ್ನು ನೋಡಬಲ್ಲ ಅನ್ನುತ್ತೆ ಇಂಗ್ಲೀಷಿನ ಗಾದೆ. ಯಡಿಯೂರಪ್ಪನವರ ಪಾಲಿಗಂತೂ ಈ ಮಾತು ಸತ್ಯವಾಯಿತು.

ವಧುವಿನ ನೆರವಿಲ್ಲದೆ ಹಸೆಮಣೆ ಏರಿ ಅಧಿಕಾರದ ಕಂಕಣ ಕಟ್ಟಿಕೊಂಡ ಯಡಿಯೂರಪ್ಪ ಮಂದಸ್ಮಿತರಾಗಿದ್ದುದು ಎಲ್ಲರ ಗಮನ ಸೆಳೆಯುತಿತ್ತು. ರೈತರ ಪರವಾಗೇ ಹೋರಾಟ ಮಾಡುತ್ತ ಒಂದು ರೀತಿಯಲ್ಲಿ ವಿಭಿನ್ನ ವ್ಯಕ್ತಿತ್ವವುಳ್ಳ ಯಡಿಯೂರಪ್ಪನವರು ರೈತರ ಹೆಸರಿನಲ್ಲೇ ಕರ್ನಾಟಕ ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ವಿಧಾನ ಸೌಧದದ ಮುಂದೆ ನೆರೆದಿದ್ದ ರೈತ ಸಮುದಾಯದಲ್ಲಿ ಮಿಂಚು ಮೂಡಿಸಿದರು.

ಯಡಿಯೂರಪ್ಪನವರ ಜೊತೆಗೆ ಬಿಜೆಪಿ ಸಹೋದ್ಯೋಗಿಗಳಾದ ಡಾ. ವಿ.ಎಸ್. ಆಚಾರ್ಯ, ಗೋವಿಂದ ಕಾರಜೋಳ, ಜಗದೀಶ್ ಶೆಟ್ಟರ್, ಆರ್. ಅಶೋಕ್ ಅವರು ಭಗವಂತನ ಹೆಸರಿನಲ್ಲಿ ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ರಾಜ್ಯಪಾಲ ರಾಮೇಶ್ವರ್ ಠಾಕೂರ್ ಕನ್ನಡದಲ್ಲೇ ಪ್ರಮಾಣ ವಚನ ಭೋದಿಸಿದ್ದು ಮತ್ತೊಂದು ಗಮನಾರ್ಹ ಸಂಗತಿಯಾಗಿತ್ತು.

ಎಂದಿನಂತೆ ಪ್ರಮಾಣವಚನ ಸಮಾರಂಭಕ್ಕೆ ಅಹ್ವಾನಿತರಿಗೆ ಮಾತ್ರ ಪ್ರವೇಶ ನೀಡಲಾಗಿತ್ತು. ಸಮಾರಂಭದುದ್ದಕ್ಕೂ ಮಂಗಳವಾದ್ಯದ ಹಿಮ್ಮೇಳನವಿತ್ತು. ಸಮಾರಂಭದಲ್ಲಿ ಜನತಾದಳ (ಎಸ್)ನ ಹಿರಿಯ ಧುರೀಣರು ಸಹ ಭಾಗವಹಿಸಿದ್ದರು.
ಬಿಜೆಪಿ ಸಡಗರ
ಡೊಳ್ಳುಕುಣಿತ, ಜಾನಪದ ನೃತ್ಯಗಳು ಪ್ರಮುಖ ಆಕರ್ಷಣೆಯಾಗಿತ್ತು. ಬಿಜೆಪಿ ಕಾರ್ಯಕರ್ತರು ಎಲ್ಲರನ್ನೂ ಕೂಗಿ ಕೂಗಿ ಕರೆದು ಯಡಿಯೂರಪ್ಪನವರಿಗೆ ಜೈ ಎನ್ನುತ್ತಾ ಸಿಹಿ ಹಂಚುತ್ತಿದ್ದ ದೃಶ್ಯ ಸರ್ವೇಸಾಮಾನ್ಯವಾಗಿತ್ತು.

ಎಲ್ಲೆಡೆ ಕೇಸರಿಮಯ

ನಗರದ ತುಂಬೆಲ್ಲಾ ಕೇಸರಿ ಧ್ವಜದ ತೂಫಾನು. ಮುಂಗಾರು ಮಳೆಯ ಪಕ್ಕದ ತೆರೆಗೆ ಸರಿದಿದ್ದರೂ ಸಹ ಕೇಸರಿ ಮಳೆಯಲ್ಲಿ ಮುದುಡಿದ್ದ ತಾವರೆ ಅರಳುವ ಸಂಭ್ರಮದ ಕ್ಷಣಗಣನೆಗೆ ದಕ್ಷಿಣ ಭಾಗದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವುದರೊಂದಿಗೆ ತೆರೆಬಿತ್ತು.

ವಿಧಾನಸೌಧದ ಮುಂದೆ ಜನಸಾಗರ. ರಾಜ್ಯದ ಇಕ್ಕೆಲಗಳಿಂದ ಅವಿರತವಾಗಿ ಹರಿದು ಬರುತ್ತಿರುವ ಜನಸಾಗರವನ್ನು ನಿಯಂತ್ರಿಸಲು 1000ದಷ್ಟಿದ್ದ ಪೊಲೀಸ್ ಸಿಬ್ಬಂದಿ ಹೆಣಗಾಡಬೇಕಾಯಿತು.

ಜನಜಾತ್ರೆಯಲ್ಲಿ ಬೆಂಗಳೂರಿನ ಟ್ರಾಫಿಕ್ ತೊಯ್ದುಹೋಗಿತ್ತು. ಎಲ್ಲೆಡೆ ಬಿಜೆಪಿ ಬಾವುಟಗಳ ಅಬ್ಬರ, ಬ್ಯಾನರುಗಳ ಸಂಭ್ರಮ, ಜೈಕಾರಗಳ ಝೇಂಕಾರ, ಕುಣಿದು ಕುಪ್ಪಳಿಸುತ್ತಿದ್ದ ಕಾರ್ಯಕರ್ತರು ನೋಡುಗರ ಕಣ್ಣಿಗೆ ಮತ್ತೊಂದು ದಸರೆಯ ಉತ್ಸವವನ್ನೇ ವಿಧಾನಸೌದದ ಮುಂದಿಟ್ಟಿದ್ದರು.

ಡೊಳ್ಳುಕುಣಿತ, ಜಾನಪದ ನೃತ್ಯಗಳು ಪ್ರಮುಖ ಆಕರ್ಷಣೆಯಾಗಿತ್ತು. ಬಿಜೆಪಿ ಕಾರ್ಯಕರ್ತರು ಎಲ್ಲರನ್ನೂ ಕೂಗಿ ಕೂಗಿ ಕರೆದು ಯಡಿಯೂರಪ್ಪನವರಿಗೆ ಜೈ ಎನ್ನುತ್ತಾ ಸಿಹಿ ಹಂಚುತ್ತಿದ್ದ ದೃಶ್ಯ ಸರ್ವೇಸಾಮಾನ್ಯವಾಗಿತ್ತು.
ಮತ್ತಷ್ಟು
ಯಡಿಯೂರಪ್ಪ, ಶೆಟ್ಟರ್, ಆಚಾರ್ಯ ಪ್ರಮಾಣವಚನ
ಯಡಿಯೂರಪ್ಪ ಸಂಪುಟಕ್ಕೆ ಶೆಟ್ಟರ್, ಅಶೋಕ್, ಆಚಾರ್ಯ
ಜೆಡಿಎಸ್ ಸಚಿವರು, ಡಿಸಿಎಂ ಪ್ರಮಾಣ ನ.15ರ ಬಳಿಕ
ಇಂದು ಮುಖ್ಯಮಂತ್ರಿಯಾಗಿ ಯಡ್ಯೂರಪ್ಪ ಪ್ರಮಾಣ ವಚನ
ಸದ್ಯದಲ್ಲೇ ಬಹುಮತ ಸಾಬೀತಿಗೆ ಸಿದ್ಧತೆ
ಬಳ್ಳಾರಿ ಘಟನೆ ಸರ್ಕಾರದ ಮೇಲೆ ಪರಿಣಾಮವಿಲ್ಲ್ಲ