ದಕ್ಷಿಣ ಭಾರತದಲ್ಲಿ ಪ್ರಪಥಮವಾಗಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವ ಸಂದರ್ಭದಲಿ ನಗರದಲ್ಲಿ ಜನರು ಪರದಾಡುವಂತಾಯಿತು.
ವಿಧಾನಸೌಧದ ಬಳಿ ಮುಖ್ಯಮಂತ್ರಿ ಯಾಗಿ ಬಿ.ಎಸ್.ಯಡಿಯೂರಪ್ಪ ಅವರು ಪ್ರಮಾಣವಚನ ಸ್ವೀಕರಿಸುವ ಐತಿಹಾಸಿಕ ಕ್ಷಣಗಳನ್ನು ಕಣ್ಣಾರೆ ವೀಕ್ಷಿಸಲು ರಾಜ್ಯದ ವಿವಿಧೆಡೆಯಿಂದ ಅವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಹಿನ್ನೆಲೆಯಲ್ಲಿ ನಗರದ ನಾನಾಕಡೆ ಸಂಚಾರವನ್ನು ನಿಷೇಧಮಾಡಿ ವಾಹನಸಂಚಾರ ಮಾರ್ಗವನ್ನು ಬದಲಾಯಿಸಲಾಗಿತ್ತು.
ಬಿಜೆಪಿಯೂ ಸೇರಿದಂತೆ ರಾಜಕೀಯ ಪಕ್ಷಗಳ ಇತ್ತೀಚಿನ ಪ್ರತಿಭಟನೆಗಳು, ಮೆರವಣಿಗೆಗಳು ಹಾಗೂ ಸಮಾವೇಶಗಳಿಂದ ತೊಂದರೆಗೆ ಒಳಗಾಗಿ ಬೇಸತ್ತಿದ್ದ ಜನರು ಇಂದೂ ಸಹಾ ಸಂಚಾರ ವ್ಯತ್ಯಯ ಉಂಟಾಗಿ ಬೇಸರ ವ್ಯಕ್ತಪಡಿಸಿದರು. ಇಡೀ ರಾಜಧಾನಿ ಕೇಸರಿಮಯವಾಗಿತ್ತು.
ರಾಜಧಾನಿಯ ಎಲ್ಲೆಡೆ ಬಿಜೆಪಿಯ ಬಾವುಟ, ಬಿಜೆಪಿ ನಾಯಕರ ಕಟೌಟ್‌ಗಳು, ಭಿತ್ತಿಪತ್ರಗಳು, ಬ್ಯಾನರ್‌ಗಳು ರಾರಾಜಿಸಿದವು.
ಬಿಜೆಪಿ ರಾಷ್ಟ್ತ್ರೀಯ ನಾಯಕರು ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲು ಆಗಮಿಸಿದ್ದರಿಂದ ಇಡೀ ಬೆಂಗಳೂರನ್ನು ಬಿಜೆಪಿ ರಾಜ್ಯ ನಾಯಕರು ಕೇಸರೀಕರಣ ಮಾಡಿ ತಮ್ಮ ಶಕ್ತಿ ಪ್ರದರ್ಶಿಸಿದರು.
ಹಬ್ಬದ ಸಂಭ್ರಮದಲ್ಲಿರುವ ಬಿಜೆಪಿ ಮುಖಂಡರು, ಕಾರ್ಯಕರ್ತರು ಹೊಸ ಬೈತನ್ಯದಿಂದ ಅಧಿಕಾರ ಗ್ರಹಣದ ಖುಷಿಯಲ್ಲಿ ತೇಲಿದರು.
|