ಗಂಟೆಗೆ ಎರಡು ಸಾವಿರ ಕಿ.ಮೀ. ದೂರ ಹಾರಬಲ್ಲ, ಆಕಾಶದಲ್ಲಿ ಹಾರಾಡುತ್ತಲೇ ಇಂಧನ ತುಂಬಿಸಿಕೊಳ್ಳುವ ಸಾಮರ್ಥ್ಯ ಹೊಂದಿರುವ ಅತ್ಯಾಧುನಿಕ ತಂತ್ರಜ್ಞಾನದ ಎರಡು ಹಾಕ್ ಸುಧಾರಿತ ಯುದ್ಧ ತರಬೇತಿ ವಿಮಾನಗಳು ಭಾರತೀಯ ವಾಯು ಸೇನಾ ಪಡೆಗೆ ಸೋಮವಾರ ಸೇರ್ಪಡೆಯಾಗಿವೆ.
ಈ ತಿಂಗಳ 7 ರಂದು ಇಂಗ್ಲೆಂಡ್‌ನಿಂದ ಅಗಸಕ್ಕೆ ಹಾರಿರುವ ಈ ಯುದ್ಧ ವಿಮಾನಗಳು ಫ್ರಾನ್ಸ್, ಗ್ರೀಕ್, ಸೌದಿ ಅರೇಬಿಯಾ, ಮೆಡಿಟರೇನಿಯನ್ ಮಾರ್ಗವಾಗಿ ಸೋಮವಾರ ಮಧ್ಯಾಹ್ನ ಬೀದರ್‌ಗೆ ಬಂದಿಳಿದಿವೆ.
ಈಗಾಗಲೇ ಈ ಯುದ್ಧ ವಿಮಾನಗಳನ್ನು ಆಸ್ಟ್ತ್ರೇಲಿಯಾ, ಕೆನಡಾ, ಫಿನ್ಲ್ಯಾಂಡ್ ಸೇರಿದಂತೆ ವಿಶ್ವದ 15 ರಾಷ್ಟ್ತ್ರಗಳು ಹೊಂದಿದ್ದು, ಈಗ ಭಾರತಕ್ಕೆ ಅತ್ಯಾಧುನಿಕ ವಿಮಾನಗಳ ಸೇವೆ ದೊರಕಿದೆ.
ವಾಯು ಸೇನಾ ಪಡೆಗೆ ಇಂಥ ಒಟ್ಟು 66 ವಿಮಾನಗಳನ್ನು ಸೇರಿಸಲಾಗುತ್ತಿದೆ. ಪ್ರಥಮ ಹಂತವಾಗಿ 24 ವಿಮಾನಗಳನ್ನು ತರಿಸಲಾಗುತ್ತಿದೆ. ನಂತರ ಬೆಂಗಳೂರಿನ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನಲ್ಲಿ (ಎಚ್ಎಎಲ್) ಉಳಿದ ವಿಮಾನಗಳನ್ನು ತಯಾರಿಸುವ ಉದ್ದೇಶ ಹೊಂದಲಾಗಿದೆ.
ದೇಶದ ವಾಯುಪಡೆಯಲ್ಲಿ ಬೀದರ್ ಕೇಂದ್ರಕ್ಕೆ ಈ ಹಾಕ್ ವಿಮಾನ ಸೇರ್ಪಡೆ ಆಗಲಿರುವುದು ಮಹತ್ವ ತಂದುಕೊಡಲಿದೆ.
ಹಾಕ್ ತರಬೇತಿ ಆರಂಭವಾಗಲಿರುವುದರಿಂದ ಬೀದರ್ ವಾಯು ಸೇನಾ ಪಡೆಯ ವಿಮಾನನಿಲ್ದಾಣದ ರನ್‌ವೇ ಅಂತಾರಾಷ್ಟ್ತ್ರೀಯ ಗುಣಮಟ್ಟಕ್ಕೆ ಸುಧಾರಿಸಲಾಗಿದೆ.
|