ದಕ್ಷಿಣ ಭಾರತದಲ್ಲಿ ಬಿಜೆಪಿಯು ಸರಕಾರವನ್ನು ಮುನ್ನಡೆಸುತ್ತಿರುವುದು ಬಿಜೆಪಿಗೆ ಸಂದ ಶ್ರೇಷ್ಠ ಗೌರವವಾಗಿದೆ ಎಂದು ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಹೇಳಿದರು.
ಬೆಂಗಳೂರಿನಲ್ಲಿ ನಿನ್ನೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಯಡಿಯೂರಪ್ಪ ಅವರಿಗೆ ಅಭಿನಂದನಾ ಸಂದೇಶ ಕಳುಹಿಸಿದ ಅವರು, ದಕ್ಷಿಣ ಭಾರತದಲ್ಲಿ ಬಿಜೆಪಿಯು ಅಧಿಕಾರಕ್ಕೆ ಬರುತ್ತಿರುವುದ ಪಕ್ಷಕ್ಕೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ ಎಂದು ಅಟಲ್ ಹೇಳಿದರು. ಅಧಿಕಾರಕ್ಕೆ ಬರುವುದು ವಿಳಂಬವಾಗಿದ್ದರೂ, 2004ರ ಅಸೆಂಬ್ಲೀ ಚುನಾವಣೆಯ ನೈಜ ತೀರ್ಮಾನವಾಗಿದೆ ಎಂದು ಅವರು ಹೇಳಿದರು.
ಪಕ್ಷ ಅಧಿಕಾರಕ್ಕೆ ಬರುವಲ್ಲಿ ಸಹಕಾರವನ್ನು ನೀಡಿದ, ತ್ಯಾಗ ಮಾಡಿದ ಬಿಜೆಪಿಯ ಅನೇಕ ಶಾಸಕರಿಗೂ ಕೂಡ ಅಟಲ್ ಕೃತಜ್ಞತೆಯನ್ನು ಸಲ್ಲಿಸಿದರು.
ಮುಖ್ಯಮಂತ್ರಿ ಸ್ಥಾನವು ಪಾರಿತೋಷಕವಲ್ಲ ಬದಲಾಗಿ ಪ್ರತಿಕೂಲವಾಗಿರುವ ಪರಿಸ್ಥಿತಿಗಳನ್ನು ಅನುಕೂಲಕರವಾಗಿ ಮಾಡಲು ಇರುವ ಸವಾಲಾಗಿದೆ, ಅಲ್ಲದೆ ಪಕ್ಷವು ಉತ್ತಮ ಆಡಳಿತದ ಮೂಲಕ ದೇಶದ ಜನತೆಯ ಕಷ್ಟಗಳನ್ನು ನಿವಾರಿಸಿ ಜನರ ಹಿತಚಿಂತನೆಯ ಬಗ್ಗೆ ಗಮನಹರಿಸಬೇಕೆಂದು ಅವರು ಈ ಸಂದರ್ಭದಲ್ಲಿ ಕರೆ ನೀಡಿದರು.
|