ನೂತನ ಮುಖ್ಯಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪ ಅವರೊಬ್ಬರೇ ಪ್ರಮಾಣವಚನ ಸ್ವೀಕರಿಸಿದರೆ ಸಚಿವ ಸಂಪುಟ ಸಭೆ ನಡೆಸಲು ಸಾಧ್ಯವಿಲ್ಲ ಎಂದು ಭಾವಿಸಿ ಬಿಜೆಪಿ ತನ್ನ ಪಕ್ಷದ ನಾಲ್ವರು ಶಾಸಕರಿಗೆ ಸಚಿವ ಹುದ್ದೆಗಳನ್ನು ಹಂಚಿತು.
ಅದರೆ, ಅವರಿಗೆ ಖಾತೆಗಳನ್ನು ಹಂಚಿಲ್ಲ. ಕೂಡಲೇ ಖಾತೆಗಳನ್ನು ಹಂಚಿದರೆ ಜೆಡಿಎಸ್ ಸಚಿವರು ಪ್ರಮಾಣ ವಚನ ಸ್ವೀಕರಿಸಿದನಂತರ ಖಾತೆಗಳ ಬಗ್ಗೆ ಕ್ಯಾತೆ ಶರುವಾಗುವ ಭೀತಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗಿದೆ.
ಮಂತ್ರಿಗಳು ಹಾಗೂ ಅವರ ಖಾತೆಗಳ ಬಗ್ಗೆ ಮಂಗಳವಾರ ಸ್ಪಷ್ಟ ಚಿತ್ರಣ ಹೊರಬೀಳುವ ನೀರೀಕ್ಷೆ ಇದೆ. ಯಡಿಯೂರಪ್ಪ ಈ ತಿಂಗಳು 23ರಂದು ವಿಧಾನಸಭೆಯಲ್ಲಿ ವಿಶ್ವಾಸ ಮತ ಕೋರುವ ಮುನ್ನ 21ರಂದು ಜೆಡಿಎಸ್ ಹಾಗೂ ಬಿಜೆಪಿಯ ಇತರ ಸಚಿವರು ಪ್ರಮಾಣವಚನ ಸ್ವೀಕರಿಸಿಲಿದ್ದಾರೆ.
ನಂತರವಷ್ಟೇ ಖಾತೆಗಳನ್ನು ಹಂಚುವುದು ಉತ್ತಮ. ಇಲ್ಲದಿದ್ದರೆ ಜೆಡಿಎಸ್ ಈ ವಿಷಯವನ್ನು ಟೀಕಾಸ್ತ್ತ್ರವಾಗಿ ಬಳಸಿಕೊಳ್ಳಬಹುದು ಎಂಬುದು ಪಕ್ಷದ ಒಂದು ವರ್ಗದ ಮುಖಂಡರ ಆತಂಕ. ಆದರೆ ರಾಜ್ಯದ ಅಭಿವೃದ್ದಿ ದೃಷ್ಟಿಯಿಂದ ಖಾತೆಗಳನ್ನು ಹಂಚುವುದು ಸೂಕ್ತ ಎಂಬುದು ಇನ್ನೊಂದು ವರ್ಗದ ಮುಖಂಡರ ಪ್ರತಿಪಾದನೆ.
|